Monday, June 29, 2026
Homeಕರಾವಳಿಉಡುಪಿಉಡುಪಿ: ಎಳೆನೀರಿನಿಂದ ಅತ್ತೆ ಮೇಲೆ ಹಲ್ಲೆ ನಡೆಸಿದ ಪಾಪಿ ಅಳಿಯ

ಉಡುಪಿ: ಎಳೆನೀರಿನಿಂದ ಅತ್ತೆ ಮೇಲೆ ಹಲ್ಲೆ ನಡೆಸಿದ ಪಾಪಿ ಅಳಿಯ

- Advertisement -
- Advertisement -

ಉಡುಪಿ: ಪಾಪಿ ಅಳಿಯನೊಬ್ಬ ತನ್ನ ವಿಕಲಾಂಗೆ ವೃದ್ಧೆ ಅತ್ತೆಗೆ ಎಳೆನೀರಿನಿಂದ ಹಲ್ಲೆ ಮಾಡಿರುವ ಘಟನೆ ಉಡುಪಿಯ ಬೈಂದೂರಿನಲ್ಲಿ ನಡೆದಿದೆ.ಮಾಚಿ ಖಾರ್ವಿ(65) ಹಲ್ಲೆಗೊಳಗಾದ ಮಹಿಳೆ.

ಮಾಚಿ ಖಾರ್ವಿ ಅವರ ಮಗಳು ಲಕ್ಷ್ಮೀಯನ್ನು ಗಂಗಾಧರ ಎಂಬಾತನಿಗೆ ವಿವಾಹ ಮಾಡಿ ಕೊಡಲಾಗಿತ್ತು.ಆದರೆ ಆತನ ಕಿರುಕುಳಕ್ಕೆ ಬೇಸತ್ತು ಲಕ್ಷ್ಮೀ ತಾಯಿ ಮನೆಗೆ ಬಂದಿದ್ದಳು. ಮೇ.4 ರಂದು ಅತ್ತೆ ಮನೆಗೆ ಬಂದ ಗಂಗಾಧರ ತನ್ನ ಪತ್ನಿಗೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ತಡೆಯಲು ಬಂದ ಅತ್ತೆಗೆ ಅಲ್ಲೇ ಇದ್ದ ಒಣಗಿದ ಎಳೆನೀರನ್ನು ಎಸೆದಿದ್ದಾನೆ.

ವೃದ್ಧೆ ಹಾಗೂ ಮಗಳು ಕೂಗಾಡೋದನ್ನು ಕೇಳಿದ ಸ್ಥಳೀಯರು ಓಡಿ ಬಂದಿದ್ದಾರೆ. ಈ ವೇಳೆ ಜೀವ ಬೆದರಿಕೆ ಹಾಕಿ ಗಂಗಾಧರ್ ಕಾಲ್ಕಿತ್ತಿದ್ದಾನೆ. ಗಾಯಗೊಂಡ ಮಹಿಳೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!