Friday, June 5, 2026
Homeಕರಾವಳಿಉಡುಪಿಮಂಗಳೂರು : ನಕಲಿ ದಾಖಲೆ ಸೃಷ್ಟಿಸಿ ವೃದ್ಧರೊಬ್ಬರಿಗೆ ವಂಚನೆ : ಮಹಿಳೆ ಸೇರಿ ಮತ್ತೋರ್ವನ ಬಂಧನ

ಮಂಗಳೂರು : ನಕಲಿ ದಾಖಲೆ ಸೃಷ್ಟಿಸಿ ವೃದ್ಧರೊಬ್ಬರಿಗೆ ವಂಚನೆ : ಮಹಿಳೆ ಸೇರಿ ಮತ್ತೋರ್ವನ ಬಂಧನ

- Advertisement -
- Advertisement -

ಮಂಗಳೂರು : ನಕಲಿ ದಾಖಲೆ ಸೃಷ್ಟಿ, ಸಹಿಯನ್ನೂ ನಕಲುಗೊಳಿಸಿ ವೃದ್ಧರೊಬ್ಬರಿಗೆ ಸೇರಿದ ಜಮೀನನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಸೆನ್ ಪೊಲೀಸರು ಮಹಿಳೆ ಸಹಿತ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮೂಲತಃ ಬೆಂಗಳೂರಿನ ಪ್ರಸ್ತುತ ಬಜ್ಪೆ ಸಮೀಪದ ಕೊಂಪದವಿನಲ್ಲಿ ವಾಸವಾಗಿರುವ ಕ್ರಿಸ್ಟಿನ್ ಎಡ್ವಿನ್ ಜೋಸೆಫ್ ಗೊನ್ಸಾಲ್ವಿಸ್ (84) ಎಂಬವರಿಗೆ ಸೇರಿದ ಜಮೀನನ್ನು ಖರೀದಿಸುವ ನೆಪದಲ್ಲಿ ಕಬಳಿಸಿದ ಆರೋಪರ ಮೇರೆಗೆ ಉಡುಪಿಯ ಅಶೋಕ್ ಕುಮಾರ್ ಮತ್ತು ರೇಷ್ಮಾ ವಾಸುದೇವ ನಾಯಕ್‌ರನ್ನು ಮಂಗಳೂರು ಸೆನ್ ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ರಾಮ ಪೂಜಾರಿಯ ಬಂಧನ ಇನ್ನಷ್ಟೆ ಆಗಬೇಕಿದೆ. ಮೂವರ ವಿರುದ್ಧ ನಕಲಿ ದಾಖಲೆ ಮತ್ತು ನಕಲಿ ಸಹಿ ಮಾಡಿ ವಂಚಿಸಿದ ಬಗ್ಗೆ ಎಫ್‌ಐಆರ್ ದಾಖಲಾಗಿದೆ.

- Advertisement -

Latest News

error: Content is protected !!