Wednesday, August 26, 2026
Homeಕರಾವಳಿಸಂಡೇ ಲಾಕ್ ಡೌನ್ : SKSSF ಸುಳ್ಯ ವಿಖಾಯ ತಂಡದಿಂದ ತಂಗುದಾಣಗಳ ಸ್ವಚ್ಛತೆ

ಸಂಡೇ ಲಾಕ್ ಡೌನ್ : SKSSF ಸುಳ್ಯ ವಿಖಾಯ ತಂಡದಿಂದ ತಂಗುದಾಣಗಳ ಸ್ವಚ್ಛತೆ

- Advertisement -
- Advertisement -

ಸುಳ್ಯ : ಸದಾ ಒಂದಲ್ಲ ಒಂದು ಸಮಾಜಮುಖಿ ಚಿಂತನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ SKSSF ಸುಳ್ಯ ವಿಖಾಯ , ಇಂದು ಸಂಡೇ ಲಾಕ್ ಡೌನ್ ರಾಜ್ಯದಲ್ಲಿ ಜಾರಿಯಲ್ಲಿದ್ದರೂ , ಸುಳ್ಯ ವಿಖಾಯ ತಂಡವು ಸಂಪಾಜೆ ಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಬದಿ ಇರುವ ಹದಿಮೂರು ಪ್ರಯಾಣಿಕ ಬಸ್ ತಂಗುದಾಣ ಪರಿಸರ ಶುಚಿಗೊಳಿಸಿ,ಮುನ್ನೆಚ್ಚರಿಕಾ ಕ್ರಮವಾಗಿ ಸೇನಿಟೈಸರ್ ಸಿಂಪಡಿಸಿ ಮಾದರಿಯಾದರು.


ಸಂಪಾಜೆ ಗ್ರಾಮ ಪಂಚಾಯತ್ ಸ್ವಚ್ಛತಾ ಸಮಿತಿ ಅಧ್ಯಕ್ಷ ಜಿ.ಕೆ,ಹಮೀದ್ ರವರ ನೇತೃತ್ವದಲ್ಲಿ ತಾಜ್ ಮಹಮ್ಮದ್ ಸಂಪಾಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಪಾಜೆ ಗ್ರಾಮ ವ್ಯಾಪ್ತಿಯ ಸಂಪಾಜೆಯಿಂದ ಗೂನಡ್ಕದ ವರೆಗಿನ ಸುಮಾರು ಹದಿಮೂರು ಬಸ್ ನಿಲ್ದಾಣಗಳನ್ನು ತೊಳೆದು ಪರಿಸರ ಶುಚಿಗೊಳಿಸಿ ಸೇನಿಟೈಸರ್ ಸಿಂಪಡಿಸಲಾಯಿತು ಹಾಗೂ ಸಂಪಾಜೆ ಪಂಚಾಯತ್ ಕಟ್ಟಡ ಸೇರಿದಂತೆ ಕಲ್ಲುಗುಂಡಿ ಪೇಟೆಯ ಆಯಕಟ್ಟಿನ ಪ್ರದೇಶಗಳಲ್ಲಿ ಸೇನಿಟೈಸರ್ ಸಿಂಪಡಿಸಿದರು.


ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಸ್,ಆಲಿ ಹಾಜಿ,ಕೆ ,ಎಂ,ಅಶ್ರಫ್.ಕಾನ ಕ್ಕೊಡ್, ಮಹಮ್ಮದ್. ಸೂಪರ್ ರಝಾಕ್, ಎಸ್,ಕೆ,ಹನೀಫ್ ಸಂಪಾಜ ,.ಸುಳ್ಯ ವಿಖಾಯ ತಂಡದ ಚೇರ್ಮೆನ್ ಷರೀಫ್ ಅಜ್ಜಾವರ, ಕನ್ವೀನರ್ ಖಲಂದರ್ ಎಲಿಮಲೆ ,ಮಹಮ್ಮದ್ ಮೇನಾಳ, ಮುನೀರ್ ದಾರಿಮಿ ಗೂನಡ್ಕ, ಇರ್ಫಾನ್ ಪೇರಡ್ಕ ಹಾಗೂ ಸಂಪಾಜೆ ಪಂಚಾಯತ್ ಸ್ವಚ್ಛತಾ ದೂತ ಬೋಜ ಕಡೆಪಾಲ ಸೇರಿದಂತೆ ಅಜ್ಜಾವರ, ಮೇನಾಳ,ಎಲಿಮಲೆ, ಗೂನಡ್ಕದ ಸುಮಾರು ಮೂವತ್ತು ಜನ ವಿಖಾಯ ಕಾರ್ಯಕರ್ತರು ಬಾಗವಹಿಸಿದ್ದರು,ಸುಳ್ಯ SKSSF ವಿಖಾಯ ಕಾರ್ಯದರ್ಶಿ ತಾಜುದ್ದೀನ್ ಟರ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿದ್ದರು

- Advertisement -

Latest News

error: Content is protected !!