Saturday, October 17, 2026
Homeಕರಾವಳಿಕೃಷಿ ಋಷಿ :ಉಜಿರೆ ಬದುಕು ಕಟ್ಟೋಣ ತಂಡದಿಂದ 60 ಎಕ್ರೆ ಭತ್ತ ಗದ್ದೆಯಲಿ ನೇಜಿ...

ಕೃಷಿ ಋಷಿ :ಉಜಿರೆ ಬದುಕು ಕಟ್ಟೋಣ ತಂಡದಿಂದ 60 ಎಕ್ರೆ ಭತ್ತ ಗದ್ದೆಯಲಿ ನೇಜಿ ನಾಟಿ

- Advertisement -
- Advertisement -

ಬೆಳ್ತಂಗಡಿ: ಸದಾ ಸಾಮಾಜಿಮುಖಿ ಚಿಂತನೆಗಳಲ್ಲಿ ಮುಂದಿರುವ ಉಜಿರೆ ಬದುಕು ಕಟ್ಟೋಣ ತಂಡದಿಂದ ಯುವ ಸಮೂಹದಾಚೆಗೆ ಕೃಷಿ ಕಾರ್ಯಕ್ಕೆ ಉತ್ತೇಜಿಸುವ ಸಲುವಾಗಿ ಕಲ್ಮಂಜ ಗ್ರಾಮದ ನಿಡಿಗಲ್ ನಲ್ಲಿ ಇಂದು 60 ಎಕ್ರೆ ಭತ್ತ ಕೃಷಿಗೆ ಚಾಲನೆ ನೀಡಲಾಯಿತು
ಕೊರೊನಾ ಲಾಕ್ ಡೌನ್ ನಿಂದ ಉದ್ಯೋಗ ಕಳೆದಕೊಳ್ಳುತ್ತಿರುವ ಸಮಯದಲ್ಲಿ ಇದೊಂದು ವಿನೂತನ ಪ್ರಯತ್ನವಾಗಿದೆ.


ಕಳೆದ ವರ್ಷ ನೆರೆ ಬಂದ ಸಮಯದಲ್ಲಿ ಕೊಳಂಬೆಯಲ್ಲಿ ಬದುಕು ಕಟ್ಟೋಣ ತಂಡದಿಂದ ಕೃಷಿ ನಡೆಸಿ ಮಾದರಿಯಾಗಿತ್ತು. ಇದರ ನೆನಪಿಗಾಗಿ ತಾಲೂಕಿನೆಲ್ಲೆಡೆ ಹಡೀಲು ಗದ್ದೆ ದತ್ತು ಪಡೆದು ಕೃಷಿಗೆ ಮುಂದಾಗಿದೆ ತಂಡ, ಇಂದು 250 ಮಂದಿಯಿಂದ ನೇಜಿ ನಾಟಿಕಾರ್ಯ ನಡೆಯಿತು.
ಈ ಸಂದರ್ಭದಲ್ಲಿ ಸಂಯೋಜಕರುಗಳಾದ ರಾಜೇಶ್ ಪೈ, ಮೋಹನ್ ಕುಮಾರ್, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿಧರ್ ಕಲ್ಮಂಜ, ಕೃಷಿಕರಾದ ಕೆಂಪಯ್ಯ ಮಡಿವಾಳ, ಕಾಂತಪ್ಪ ಮಡಿವಾಳ, ಶೀನ ದೇವಾಡಿಗ,ರಾಜು ಮಡಿವಾಳ, ಶ್ರೀಧರ್ ನಿಡಿಗಲ್ ಮತ್ತಿತರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!