ಕುಟ್ರುಪ್ಪಾಡಿ:ಕೊನೊನಾ ವೈರಸ್ ಮುಂಜಾಗೃತ ಕ್ರಮವಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು ಇದರ ಪರಿಣಾಮ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದೆ. ಕುಟ್ರುಪ್ಪಾಡಿ, ಕಡಬ ಭಾಗದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಕಡಬದ ಬಿಜೆಪಿ ಮುಖಂಡ ,ಸಾಮಾಜಿಕ ಮುಂದಾಳು ಕೃಷ್ಣ ಶೆಟ್ಟಿ ಅಕ್ಕಿ ಮತ್ತು ಅಗತ್ಯವಸ್ತು ನೀಡಿದ್ದಾರೆ.
ತಮ್ಮ ವಾರ್ಡಿನ ಎಲ್ಲಾ ಬಡಕುಟುಂಬಗಳಿಗೆ ತಲಾ 10 ಕೆ.ಜಿ ಅಕ್ಕಿಯೊಂದಿಗೆ ದಿನಬಳಕೆಯ ಅಗತ್ಯ ವಸ್ತುಗಳನ್ನು ಸ್ವಂತ ಖರ್ಚಿನಲ್ಲಿ ನೀಡಿ ತುರ್ತು ಸಂದರ್ಭದಲ್ಲಿ ಸ್ಪಂದಿಸಿದ್ದಾರೆ. ಸುಮಾರು 25 ಮನೆಗಳಿಗೆ ಭೇಟಿ ನೀಡಿ ಕುಟುಂಬದ ಸ್ಥಿತಿಗತಿ ಗಮನಿಸಿ ದಿನಸಿ ಸಾಮಾಗ್ರಿಗಳನ್ನು ನೀಡಿದ್ದಾರೆ.
ಮನೆ ಮನೆಗೆ ತೆರಳುವ ವೇಳೆ ರಾಜ್ ಕುಮಾರ್, ಉದಯ ಕುಮಾರ್,ಯೋಗಿಶ್, ಮಾ. ಭವಿನ್ ಸಹಕರಿಸಿದರು.
(ಜನರು ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ವರದಿಯನ್ನು ನಿಮ್ಮ “ಮಹಾ ಎಕ್ಸ್ಪ್ರೆಸ್” ನಲ್ಲಿ ಪ್ರಕಟಿಸುತ್ತಿದ್ದೇವೆ. ನಿಮ್ಮೂರಿನಲ್ಲೂ ಇಂತಹ ಕಾರ್ಯ ಮಾಡಿದ್ದರೆ +91 91378 26338 ನಂಬರ್ ಗೆ ವಾಟ್ಸಾಪ್ ನಲ್ಲಿ ಮಾಹಿತಿ ನೀಡಿ-ಸಂಪಾದಕರು)