ಅಮ್ಮುಂಜೆ: ಬಂಟ್ವಾಳ ತಾಲೂಕಿನ ಅಮ್ಮುಂಜೆಯಲ್ಲಿ ಕೊರೋನಾ ಲಾಕ್ ಡೌನ್ ಭೀತಿಯಿಂದಾಗಿ ದಿನಕೂಲಿ ಕಾರ್ಮಿಕರಿಗೆ ಸರಿಯಾದ ಕೆಲಸ ಸಿಗದೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ 75 ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ವೀರ ಯೋಧ ಯಾದವ ಪ್ರೇಂಡ್ಸ್(ರಿ), ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನ ಅಮ್ಮುಂಜೆ ಹಾಗೂ ಭಾರತೀಯ ಜನತಾ ಪಾರ್ಟಿ ಇದರ ಸಂಯುಕ್ತ ಆಶ್ರದಲ್ಲಿ ಅಕ್ಕಿ ಮತ್ತು ದಿನಬಳಕೆಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಮಹತ್ಕಾರ್ಯದ ಮುಂದಾಳತ್ವವನ್ನು ಊರಿನ ಗಣ್ಯ ವಿನೋದ್ ನಾಯ್ಕ್ ಅಮ್ಮುಂಜೆ ಗುತ್ತು, ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಟ್ರಸ್ಟಿ ದೇವದಾಸ್ ಹೆಗ್ಡೆ ಅಮ್ಮುಂಜೆ ಗುತ್ತು, ಸ್ಥಳೀಯ ಬಿಜೆಪಿ ಮುಖಂಡರಾದ ಕಾರ್ತಿಕ್ ಬಲ್ಲಾಳ್ ಮತ್ತು ಹರೀಶ್ ಭಟ್ ವಹಿಸಿಕೊಂಡಿದ್ದರು.
(ಜನರು ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಈ ವರದಿಯನ್ನು ನಿಮ್ಮ “ಮಹಾ ಎಕ್ಸ್ಪ್ರೆಸ್” ನಲ್ಲಿ ಪ್ರಕಟಿಸುತ್ತಿದ್ದೇವೆ. ನಿಮ್ಮೂರಿನಲ್ಲೂ ಇಂತಹ ಕಾರ್ಯ ಮಾಡಿದ್ದರೆ +91 91378 26338 ನಂಬರ್ ಗೆ ವಾಟ್ಸಾಪ್ ನಲ್ಲಿ ಮಾಹಿತಿ ನೀಡಿ-ಸಂಪಾದಕರು)