Saturday, May 18, 2024
Homeತಾಜಾ ಸುದ್ದಿಯುವಕನ ಪ್ಯಾಂಟ್ ಸೇರಿದ ಹಾವು..ಆಮೇಲೇನಾಯ್ತು ಗೊತ್ತಾ ?

ಯುವಕನ ಪ್ಯಾಂಟ್ ಸೇರಿದ ಹಾವು..ಆಮೇಲೇನಾಯ್ತು ಗೊತ್ತಾ ?

spot_img
- Advertisement -
- Advertisement -

ಉತ್ತರಪ್ರದೇಶ : ಹಾವು ಕಂಡ್ರೆ ಹೌಹಾರುವವರೇ ಜಾಸ್ತಿ. ಅದ್ರಲ್ಲೂ ಹಾವು ಪ್ಯಾಂಟ್ ಒಳಗೆ ಹೊಕ್ಕಿದೆ ಎಂಬುದು ಗೊತ್ತಾದ್ರೆ ಅನೇಕರಿಗೆ ಹೃದಯಾಘಾತವಾಗುತ್ತದೆ. ಆದ್ರೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಪ್ಯಾಂಟ್ ಒಳಗೆ ಹಾವು ಹೋಗಿದ್ದು ಗೊತ್ತಾದ ಮೇಲೆ ಹಾವಿನಿಂದ ರಕ್ಷಿಸಿಕೊಳ್ಳಲು ಸತತ 7 ಗಂಟೆಗಳ ಕಾಲ ನಿಂತಿದ್ದಾನೆ.

ಘಟನೆ ಉತ್ತರ ಪ್ರದೇಶದ ಮಿರ್ಜಾಪುರದ ಸಿಕಂದರ್‌ಪುರ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ಕಂಬಗಳು, ತಂತಿ ಹಾಕುವ ಕಾರ್ಮಿಕ ಲವ್ ಕೇಶ್ ಕುಮಾರ್ ಕೆಲಸ ಮುಗಿಸಿ ಮಲಗಿದ್ದ. ಈ ವೇಳೆ ಆತನ ಪ್ಯಾಂಟ್ ಒಳಗೆ ಹಾವು ಹೊಕ್ಕಿದೆ. ಹಾವು ಪ್ಯಾಂಟ್ ಒಳಗೆ ಹೋಗಿರುವುದು ಗೊತ್ತಾಗ್ತಿದ್ದಂತೆ ನಿಧಾನವಾಗಿ ಎದ್ದು ನಿಂತ ಲವ್ ಕೇಶ್, ಕಂಬ ಹಿಡಿದು 7 ಗಂಟೆ ನಿಂತಿದ್ದಾನೆ.

ಬೆಳಿಗ್ಗೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಹಾವು ತಜ್ಞರು, ಲವ್ ಕೇಶ್ ಪ್ಯಾಂಟ್ ಕತ್ತರಿಸಿ ಹಾವನ್ನು ಹೊರ ತೆಗೆದಿದ್ದಾರೆ. ಈ ಸುದ್ದಿ ಗೊತ್ತಾಗ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಸೇರಿದಂತೆ ಸ್ಥಳೀಯರು ಅಲ್ಲಿ ಜಮಾಯಿಸಿದ್ದರು. ಇದ್ರ ವಿಡಿಯೋ ಈಗ ವೈರಲ್ ಆಗಿದೆ. ಏಳು ಗಂಟೆಗಳ ಕಾಲ ಪ್ಯಾಂಟ್ ಒಳಗಿದ್ದರೂ ಹಾವು ಕಚ್ಚದಿರುವುದು ಸಮಾಧಾನದ ಸಂಗತಿ.

- Advertisement -
spot_img

Latest News

error: Content is protected !!