Thursday, June 4, 2026
Homeಕರಾವಳಿಉಡುಪಿಪಡುಬಿದ್ರಿ: ಹಾವು ಕಚ್ಚಿ ನಿವೃತ್ತ ಸೈನಿಕ ಸಾವು

ಪಡುಬಿದ್ರಿ: ಹಾವು ಕಚ್ಚಿ ನಿವೃತ್ತ ಸೈನಿಕ ಸಾವು

- Advertisement -
- Advertisement -

ಪಡುಬಿದ್ರಿ, : ವಿಷದ ಹಾವು ಕಚ್ಚಿದ ಪರಿಣಾಮ ನಿವೃತ್ತ ಸೈನಿಕರೊಬ್ಬರು ಮೃತಪಟ್ಟ ಘಟನೆ ಪಡುಬಿದ್ರೆಯ ಬಡಾ ಎರ್ಮಾಳ್ ಗ್ರಾಮದ ಭಾರತ್ ನಗರ ಎಂಬಲ್ಲಿ ನಡೆದಿದೆ. ಭಾರತ್ ನಗರ ನಿವಾಸಿ, ನಿವೃತ್ತ ಸೈನಿಕ ರಮೇಶ್ ಕೆ.(62) ಮೃತ ದುರ್ದೈವಿ.

ಮನೆಯ ಕಂಪೌಂಡ್ ಒಳಗೆ ತೆಂಗಿನ ಮರದಿಂದ ಬಿದ್ದ ಗರಿಗಳನ್ನು ಹೆಕ್ಕಲು ಹೋದ ರಮೇಶ್ ಅವರ ಕಾಲಿನ ಪಾದಕ್ಕೆ ವಿಷದ ಹಾವು ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!