Wednesday, October 5, 2022
Homeಇತರಚಿಕನ್ ಫ್ರೈಡ್ ರೈಸ್ ಹಾಗೂ ತಂದೂರಿ ತಿಂದ ವಿದ್ಯಾರ್ಥಿ ಸಾವು

ಚಿಕನ್ ಫ್ರೈಡ್ ರೈಸ್ ಹಾಗೂ ತಂದೂರಿ ತಿಂದ ವಿದ್ಯಾರ್ಥಿ ಸಾವು

- Advertisement -
- Advertisement -

ಚೆನ್ನೈ: ಚಿಕನ್ ಫ್ರೈಡ್ ರೈಸ್ ಹಾಗೂ ತಂದೂರಿ ತಿಂದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಎಂಬಲ್ಲಿ ನಡೆದಿದೆ. ತಿರುಮುರುಗನ್(17) ಮೃತ ವಿದ್ಯಾರ್ಥಿ. 

ತಿರುಮುರುಗನ್​ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದ. ಫಲಿತಾಂಶಕ್ಕಾಗಿ ಕಾಯುತ್ತಿದ್ದ. ಆತ ಅರಣಿ ಟೌನ್ ಗಾಂಧಿ ರಸ್ತೆಯ 5 ಸ್ಟಾರ್ ಎಲೈಟ್ ಹೋಟೆಲ್​ನಲ್ಲಿ ಸ್ನೇಹಿತರೊಂದಿಗೆ ಚಿಕನ್ ತಂದೂರಿ ಮತ್ತು ಫ್ರೈಡ್ ರೈಸ್ ಸೇವಿಸಿದ್ದ. ಅಂದು ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿಯಾಗಿದೆ. ಮರುದಿನ ಬೆಳಗ್ಗೆ ಕುಟುಂಬಸ್ಥರು ತಿರುಮುರುಗನ್​ನನ್ನು ಸಮೀಪದ ಖಾಸಗಿ ಕ್ಲಿನಿಕ್​ಗೆ ದಾಖಲಿಸಿದ್ದಾರೆ. ಆದರೆ ಆತ‌ ಮೃತಪಟ್ಟಿದ್ದಾನೆ.

ಘಟನೆ ಬೆನ್ನಲ್ಲೇ ಹೋಟೆಲ್​ನಲ್ಲಿ ತಿಂದ ತಂದೂರಿ ಚಿಕನ್ ವಿಷಪೂರಿತ ಆಗಿದ್ದರಿಂದಲೇ ಮಗ  ಮೃತಪಟ್ಟಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

- Advertisement -
spot_img
spot_img
- Advertisment -

Latest News

error: Content is protected !!