Monday, April 29, 2024
Homeಕರಾವಳಿಲಾಕ್ ಡೌನ್ ಮದ್ಯೆಯೇ ಮಾನವೀಯ ಸೇವೆ ನೀಡುತ್ತಿರುವ ದ.ಕ ಜಿಲ್ಲೆಯ SKSSF ವಿಖಾಯ ರಕ್ತದಾನಿ ಬಳಗ

ಲಾಕ್ ಡೌನ್ ಮದ್ಯೆಯೇ ಮಾನವೀಯ ಸೇವೆ ನೀಡುತ್ತಿರುವ ದ.ಕ ಜಿಲ್ಲೆಯ SKSSF ವಿಖಾಯ ರಕ್ತದಾನಿ ಬಳಗ

spot_img
- Advertisement -
- Advertisement -

ಮಂಗಳೂರು: ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಮೌರಿಸ್ ಪ್ರಕಾಶ್ ಡಿ’ಸೌಝಾ ಎಂಬವರಿಗೆ ಬೇಕಾದ 6 ಯುನಿಟ್ ರಕ್ತವನ್ನು ವಿಖಾಯ ರಕ್ತದಾನಿ ಬಳಗದ ಮಂಗಳೂರು ವಲಯದ ಸದಸ್ಯರೂ SKSSF ಫರಂಗಿಪೇಟೆ ಶಾಖೆ ಸಕ್ರಿಯ ಸದಸ್ಯರಾದ ಸಲೀಂ, ಕುಂಪನಮಜಲ್ ಶಾಖೆಯ ಶಾಕಿರ್ ಮತ್ತು ಕಣ್ಣೂರ್ ಬಲ್ಲೂರುಗುಡ್ಡೆ ಶಾಖೆ ಸದಸ್ಯರಾದ ಆಸಿಫ್, ಮತ್ತು ಸಿರಾಜ್. ಬೆಂಗರೆ ಶಾಖೆಯ ಅಲ್ಮಾಝ್ ಮಲಿಕ್, ಕುದ್ರೋಳಿ ಶಾಖೆಯ ಅರ್ಬಾಝ್ ರವರು ಇಂದು ರಕ್ತದಾನ ಮಾಡಿದರು.

ಮಂಗಳೂರು ಜ್ಯೋತಿ KMC ಆಸ್ಪತ್ರೆಯಲ್ಲಿ ಮೋಹಿನಿ ಎಂಬವರ ಮಗುವಿಗೆ ಬೇಕಾದ O ನೆಗೆಟಿವ್ ರಕ್ತದಾನ ಮಾಡಿದ ವಿಖಾಯ ರಕ್ತದಾನಿ ಬಳಗದ ಸದಸ್ಯರೂ SKSSF‌‌ ವಳಚ್ಚಿಲ್ ಪದವು ಶಾಖಾ ಸಕ್ರಿಯ ಸದಸ್ಯರಾದ ರಮೀಝ್ ಕೂಡಾ ರಕ್ತದಾನ ಮಾಡಿ ಮಾನವೀಯ ಸೇವೆ ನೀಡಿದರು,,

ಅದೇ ರೀತಿ ನಿನ್ನೆಯೂ ಕೂಡಾ ವಿಖಾಯ ರಕ್ತದಾನಿ ಬಳಗದ ಸದಸ್ಯರು AJ ಆಸ್ಪತ್ರೆಯಲ್ಲಿ ಮೂರು ಯೂನಿಟ್ ರಕ್ತದಾನ ಮಾಡಿದ್ದರು, ತುರ್ತು ಸಂದರ್ಭಗಳಲ್ಲಿ ಮಾನವೀಯ ಸೇವೆಯಲ್ಲಿ ನಿರತರಾದ SKSSF ವಿಖಾಯ ರಕ್ತದಾನಿ ಬಳಗದ ಕಾರ್ಯವೈಖರಿ ಸಮಾಜದಲ್ಲಿ ಪ್ರಶಂಸಲ್ಪಡುತ್ತಿದೆ

ಇಂದಿನ ಎಲ್ಲ ರಕ್ತದಾನಿಗಳಿಗೂ ದ,ಕ,ಜಿಲ್ಲಾ SKSSF ವಿಖಾಯ ರಕ್ತದಾನಿ ಬಳಗದ ಉಸ್ತುವಾರಿ ತಾಜುದ್ದೀನ್ ಟರ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದು,ಜಿಲ್ಲೆಯ ಯಾವ ಬಾಗದಲ್ಲಿಯೂ ತುರ್ತು ರಕ್ತದ ಅವಶ್ಯಕತೆ ಬಂದಲ್ಲಿ ಸ್ಥಳೀಯ SKSSF ವಿಖಾಯ ಸದಸ್ಯರನ್ನು ಸಂಪರ್ಕಿಸಲು ತಾಜುದ್ದೀನ್ ಟರ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!