Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಎಸ್‌.ಕೆ.ಎಸ್.ಎಸ್.ಎಫ್ ಕಾಜೂರು ಕ್ಲಸ್ಟರ್ ಆನುವೆಲ್ ಕ್ಯಾಬಿನೆಟ್ ಮೀಟ್

ಬೆಳ್ತಂಗಡಿ: ಎಸ್‌.ಕೆ.ಎಸ್.ಎಸ್.ಎಫ್ ಕಾಜೂರು ಕ್ಲಸ್ಟರ್ ಆನುವೆಲ್ ಕ್ಯಾಬಿನೆಟ್ ಮೀಟ್

- Advertisement -
- Advertisement -

ಬೆಳ್ತಂಗಡಿ : ಗುರುವಾರ 13/02/2025 : ಕೇಂದ್ರ ಸಮಿತಿ ನಿರ್ದೇಶನದಂತೆ ನಡೆಸಲ್ಪಡುವ ಎಸ್‌.ಕೆ.ಎಸ್.ಎಸ್.ಎಫ್ ಕಾಜೂರು ಕ್ಲಸ್ಟರ್ ಆನುವೆಲ್ ಕ್ಯಾಬಿನೆಟ್ ಮೀಟ್ ಎಸ್‌.ಕೆ.ಎಸ್.ಎಸ್.ಎಫ್ ಕೊಯ್ಯೂರು ಶಾಖೆಯಲ್ಲಿ ಗುರುವಾರದಂದು ಸಂಜೆ ನಡೆಯಿತು.

ನಝೀರ್ ಮುಸ್ಲಿಯಾರ್ ದುಆದ ಮೂಲಕ ಕಾರ್ಯಕ್ರಮಕ್ಕೆ ಔದ್ಯೋಗಿಕವಾದ ಚಾಲನೆಯನ್ನು ನೀಡಿದರು. ಕಾರ್ಯಕ್ರಮವು ಕಾಜೂರು ಕ್ಲಸ್ಟರ್ ಅಧ್ಯಕ್ಷರಾದ ಉಮರ್ ಪಿ.ಎ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಎಸ್‌.ಕೆ.ಎಸ್.ಎಸ್.ಎಫ್ ಕಾಜೂರು ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಶರೀಫ್ ಅನ್ಸಾರಿ ಉಸ್ತಾದ್ ಎಸ್‌.ಕೆ.ಎಸ್.ಎಸ್.ಎಫ್ ಸಂಘಟನೆಯ ಕಾರ್ಯವೈಖರಿಯನ್ನು ಮತ್ತು ಅದರ ಧ್ಯೇಯವನ್ನು ಸವಿಸ್ತಾರವಾಗಿ ವಿವರಿಸಿ ಸಭೆಗೆ ಸ್ವಾಗತವನ್ನು ಕೋರಿದರು.

ಬೆಳ್ತಂಗಡಿ ವಲಯ ವಿಖಾಯ ಚೆಯರ್ಮಾನ್ ಸಿದ್ದೀಖ್ ಅಝ್ಹರಿ ಉಸ್ತಾದ್ ಸಂಘಟನೆಯು ಬೆಳೆದು ಬಂದ ಹಾದಿ ಮತ್ತು ಸಮಸ್ತದ ವಿದ್ವಾಂಸರ ಮಹತ್ವವನ್ನು ವಿವರಿಸಿ ಸಭೆಯನ್ನು ಉದ್ಘಾಟಿಸಿದರು. ಎಸ್‌.ಕೆ.ಎಸ್.ಎಸ್.ಎಫ್ ಕೊಯ್ಯೂರು ಶಾಖೆಯ ಪ್ರಧಾನ ಕಾರ್ಯದರ್ಶಿ ಅಝೀಝ್ ಅಶ್ಶಾಫೀ ಆನುವೆಲ್ ಕ್ಯಾಬಿನೆಟ್ ಕುರಿತು ಮಾಹಿತಿಯನ್ನು ನೀಡುತ್ತಾ ಸಂಘಟನೆಯ ಪ್ರಸಕ್ತ ಆಗುಹೋಗುಗಳ ಕುರಿತು ವಿವರಿಸಿದರು. ಎಸ್‌.ಕೆ.ಎಸ್.ಎಸ್.ಎಫ್ ಕೊಯ್ಯೂರು ಶಾಖೆಯ ಕೋಶಾಧಿಕಾರಿ ಹನೀಫ್ ದಾರಿಮಿ ಸಭೆಗೆ ವಂದಿಸಿದರು. ಸಭೆಯಲ್ಲಿ ಎಸ್‌.ಕೆ.ಎಸ್.ಎಸ್.ಎಫ್ ಕೊಯ್ಯೂರು ಶಾಖೆಯ ಅಧ್ಯಕ್ಷರಾದ ಸಲೀಂ ಪಾತ್ರಾಳ ಗೌರವಾಧ್ಯಕ್ಷರಾದ ಉಸ್ಮಾನ್ ಮುಸ್ಲಿಯಾರ್ ಕೋಡಿಬೊಟ್ಟು ಸೇರಿದಂತೆ ಸವಣಾಲು, ಪೆರ್ದಾಡಿ, ದಿಡುಪೆ ಮತ್ತು ಕೊಯ್ಯೂರು ಶಾಖೆಯ ಪ್ರತಿನಿಧಿಗಳು ಭಾಗವಹಿಸಿದ್ದರು.

- Advertisement -

Latest News

error: Content is protected !!