Sunday, July 5, 2026
Homeಚಿಕ್ಕಮಗಳೂರುಮಲೆನಾಡಿನಲ್ಲಿ ಮುಂದುವರಿದ ಮಳೆ ಅಬ್ಬರ: ಮಳೆ ನಿಲ್ಲಿಸುವಂತೆ ಶೃಂಗೇರಿ ಸ್ವಾಮೀಜಿ ಮೊರೆ ಹೋದ ಹಾಲಿ‌ ಮತ್ತು...

ಮಲೆನಾಡಿನಲ್ಲಿ ಮುಂದುವರಿದ ಮಳೆ ಅಬ್ಬರ: ಮಳೆ ನಿಲ್ಲಿಸುವಂತೆ ಶೃಂಗೇರಿ ಸ್ವಾಮೀಜಿ ಮೊರೆ ಹೋದ ಹಾಲಿ‌ ಮತ್ತು ಮಾಜಿ ಶಾಸಕರು

- Advertisement -
- Advertisement -

ಶೃಂಗೇರಿ: ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರಿದ ಹಿನ್ನೆಲೆಯಲ್ಲಿ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಿಗೆ ಹಾಲಿ-ಮಾಜಿ ಶಾಸಕರು ಮೊರೆ ಹೋಗಿದ್ದಾರೆ.

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಡಿ.ಎನ್. ಜೀವರಾಜ್ ಹಾಗೂ ಹಾಲಿ ಶಾಸಕ ಟಿ. ಡಿ. ರಾಜೇಗೌಡ ಅತಿವೃಷ್ಟಿ ನಿಲ್ಲಿಸುವಂತೆ ಜಗದ್ಗುರುಗಳ ಮೊರೆ ಹೋಗಿದ್ದಾರೆ.

ಶಾರದಾಂಬೆಗೆ ಪೂಜೆ ಸಲ್ಲಿಸಿ ಮಳೆ ನಿಲ್ಲಿಸುವಂತೆ ಶೃಂಗೇರಿ ಜಗದ್ಗುರು ಭಾರತೀ ತೀರ್ಥ ಸ್ವಾಮೀಜಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಹಾಲಿ ಶಾಸಕ ಮತ್ತು ಬಿಜಿಪಿ ಮಾಜಿ ಶಾಸಕರಿಂದ ಒಟ್ಟೊಟ್ಟಿಗೆ ಪ್ರಾರ್ಥನೆ ಸಲ್ಲಿಸಲ್ಪಟ್ಟಿದ್ದು, ಎಂದೂ ಕೂಡ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದ ನಾಯಕರು ಇಂದು ಒಟ್ಟೊಟ್ಟಿಗೆ ಸ್ವಾಮೀಜಿ ಮುಂದೆ ಕಾಣಿಸಿಕೊಂಡಿದ್ದಾರೆ.

ಶೃಂಗೇರಿಯಲ್ಲಿ ವಾಡಿಕೆ ಮಳೆಗಿಂತ ಈ ಬಾರಿ ಎರಡು ಪಟ್ಟು ಹೆಚ್ಚು ಮಳೆ ಸುರಿದಿದೆ.

- Advertisement -

Latest News

error: Content is protected !!