Thursday, June 4, 2026
Homeಚಿಕ್ಕಮಗಳೂರುಮಳೆ ಹಾನಿ ಸಂತ್ರಸ್ತರನ್ನು ಮಾತನಾಡಿಸದ್ದಕ್ಕೆ ಆಕ್ಷೇಪ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ರಸ್ತೆ ತಡೆ...

ಮಳೆ ಹಾನಿ ಸಂತ್ರಸ್ತರನ್ನು ಮಾತನಾಡಿಸದ್ದಕ್ಕೆ ಆಕ್ಷೇಪ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ರಸ್ತೆ ತಡೆ ನಡೆಸಿ ಪ್ರತಿಭಟನೆ

- Advertisement -
- Advertisement -

ಚಿಕ್ಕಮಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದ ವೇಳೆ ಸ್ಥಳೀಯರ ಪ್ರತಿಭಟನೆ ಎದುರಿಸಬೇಕಾದ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ
ಗುಡ್ಡೆತೋಟದಲ್ಲಿ ಸಂತ್ರಸ್ಥರನ್ನು ಮಾತನಾಡಿಸದೇ ಹೋದ ಕಾರಣಕ್ಕಾಗಿ ಶೋಭಾ ಕರಂದ್ಲಾಜೆ ವಿರುದ್ಧ ಸಂತ್ರಸ್ತರು ಏಕಾಏಕಿ ಪ್ರತಿಭಟನೆಗೆ ಇಳಿದಿದ್ದಾರೆ.

ಹೊರನಾಡು-ಶೃಂಗೇರಿ ಮಾರ್ಗದಲ್ಲಿ ರಸ್ತೆ ತಡೆ ನಡೆಸಿ ಸಂತ್ರಸ್ತರು ಪ್ರತಿಭಟನೆಗೆ ನಡೆಸಿದ್ದಾರೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳ ಜೊತೆ ಗುಡ್ಡೆತೋಟ ಗ್ರಾಮದಲ್ಲಿ ಕುಸಿದ ಸ್ಥಳ ವೀಕ್ಷಿಸಿ ಸಂತ್ರಸ್ತರನ್ನು ಮಾತನಾಡಿಸದೇ ತೆರಳಿದ ಕಾರಣಕ್ಕಾಗಿ ಸಂತ್ರಸ್ತರು ಸಿಟ್ಟಿಗೆದ್ದಿದ್ದರು.

- Advertisement -

Latest News

error: Content is protected !!