Thursday, May 2, 2024
Homeತಾಜಾ ಸುದ್ದಿಸಿಡಿ ಲೇಡಿ ಮನೆ ಮೇಲೆ ಎಸ್ ಐಟಿ ದಾಳಿ: ಮನೆಯಲ್ಲಿದ್ದ ನಗದು ನೋಡಿ ಅಧಿಕಾರಿಗಳೇ ಶಾಕ್!

ಸಿಡಿ ಲೇಡಿ ಮನೆ ಮೇಲೆ ಎಸ್ ಐಟಿ ದಾಳಿ: ಮನೆಯಲ್ಲಿದ್ದ ನಗದು ನೋಡಿ ಅಧಿಕಾರಿಗಳೇ ಶಾಕ್!

spot_img
- Advertisement -
- Advertisement -

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿಯಲ್ಲಿರುವ ಯುವತಿ ಮನೆಗೆ ನಿನ್ನೆ ಎಸ್​ಐಟಿ ತಂಡ ಏಕಾಏಕಿ ಭೇಟಿ ನೀಡಿ, ಪರಿಶೀಲನೆ ನಡೆಸಿದೆ. ಈ ವೇಳೆ ಆ ಯುವತಿಯ ಮನೆಯಲ್ಲಿ ಲಕ್ಷಾಂತರ ರೂ. ಪತ್ತೆಯಾಗಿರುವುದು ಹಲವು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ.


ರಮೇಶ್ ಜಾರಕಿಹೊಳಿ ಅವರ ಜೊತೆ ವಿಡಿಯೋದಲ್ಲಿದ್ದ ಯುವತಿ ವಾಸವಾಗಿದ್ದ ಬೆಂಗಳೂರಿನ ಆರ್​ಟಿ ನಗರದಲ್ಲಿರುವ ಮನೆಯಲ್ಲಿ ನಿನ್ನೆ ರಾತ್ರಿ 10 ಗಂಟೆಯವರೆಗೂ ಎಸ್​ಐಟಿ ತಂಡ ಪರಿಶೀಲನೆ ನಡೆಸಿತ್ತು. ಈ ವೇಳೆ ಆಕೆಯ ಮನೆಯಲ್ಲಿ 9.2 ಲಕ್ಷ ರೂ. ಹಣ ಪತ್ತೆಯಾಗಿದೆ. ಆ ಹಣವನ್ನು ವಶಕ್ಕೆ ಪಡೆದು, ಹಣದ ಮೂಲದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಿಡಿಯಲ್ಲಿರುವ ಯುವತಿ ವಾಸವಿದ್ದ ಮನೆಗೆ ಎಸ್‌ಐಟಿ ತಂಡ ದಿಢೀರ್ ಭೇಟಿ ನೀಡಿತ್ತು. ಎಸಿಪಿ ಧರ್ಮೇಂದ್ರ ನೇತೃತ್ವದ ಎಸ್​ಐಟಿ ತಂಡದಿಂದ ಆಕೆಯ ಮನೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಯುವತಿ ವಾಸವಿದ್ದ ಮನೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು. ಸಿಡಿಯಲ್ಲಿರುವ ಯುವತಿಯನ್ನು ಯಾರಾದರೂ ಇತ್ತೀಚಿಗೆ ಮತ್ತೆ ಸಂಪರ್ಕಿಸಿದ್ದರಾ? ಆಕೆ ಇಲ್ಲಿದ್ದ ಸಂದರ್ಭದಲ್ಲಿ ಬೇರೆ ಯಾರಾದರೂ ಇಲ್ಲಿ ಭೇಟಿ ನೀಡುತ್ತಿದ್ದರಾ? ಎಂಬ ಬಗ್ಗೆ ಕಟ್ಟಡದ ಮಾಲೀಕರ ಬಳಿ ಪ್ರಶ್ನೆ ಮಾಡಲಾಗಿದೆ.

ರಮೇಶ್ ಜಾರಕಿಹೊಳಿ ಜೊತೆಗಿನ ವಿಡಿಯೋ ಬಹಿರಂಗಗೊಳ್ಳುತ್ತಿದ್ದಂತೆ ನಾಪತ್ತೆಯಾಗಿದ್ದ ಯುವತಿ 3-4 ದಿನಗಳ ಹಿಂದೆ ಕಟ್ಟಡದ ಮಾಲೀಕರಿಗೆ ಫೋನ್ ಮಾಡಿ ಕ್ಷಮೆ ಕೇಳಿದ್ದಳು ಎಂಬ ಮಾಹಿತಿ ಎಸ್​ಐಟಿಗೆ ಸಿಕ್ಕಿತ್ತು. ಇದರ ನಡುವೆ ಮಂಗಳವಾರ ಬೆಳಗಾವಿಯಲ್ಲಿ ಆಕೆಯ ತಂದೆ-ತಾಯಿ ತಮ್ಮ ಮಗಳನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ದೂರು ನೀಡಿ, ಕಣ್ಣೀರಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣ ಮತ್ತಷ್ಟು ಕುತೂಹಲ ಸೃಷ್ಟಿಸುತ್ತಿದೆ

- Advertisement -
spot_img

Latest News

error: Content is protected !!