Sunday, June 7, 2026
Homeಕ್ರೀಡೆಕುಸ್ತಿಕೂಟದಲ್ಲಿ ಒಂದು ಅಂಕದಿಂದ ಸೋಲು: ಗೀತಾ, ಬಬಿತಾ ಪೋಗಟ್ ರ ಸೋದರ ಸಂಬಂಧಿ ರಿತಿಕಾ ಪೋಗಟ್...

ಕುಸ್ತಿಕೂಟದಲ್ಲಿ ಒಂದು ಅಂಕದಿಂದ ಸೋಲು: ಗೀತಾ, ಬಬಿತಾ ಪೋಗಟ್ ರ ಸೋದರ ಸಂಬಂಧಿ ರಿತಿಕಾ ಪೋಗಟ್ ಆತ್ಮಹತ್ಯೆ!

- Advertisement -
- Advertisement -

ನವದೆಹಲಿ: ಭಾರತೀಯ ಕುಸ್ತಿ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಬುಧವಾರ ಭರತ್‌ಪುರದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ 1 ಪಾಯಿಂಟ್‌ನಿಂದ ಸೋತ ಬೆನ್ನಲ್ಲೇ ರಿತಿಕಾ ಫೋಗಟ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ಸಿದ್ಧ ಫೋಗಾಟ್ ಕುಟುಂಬದ 17 ವರ್ಷದ ರಿತಿಕಾ ಫೋಗಟ್ ಅವರು, ಬಬಿತಾ ಫೋಗಟ್ ಸೋದರ ಸಂಬಂಧಿಯ ಸಹೋದರಿ ಆಗಿದ್ದಾರೆ. ರಾಜ್ಯಮಟ್ಟದ ಉಪ ಜೂನಿಯರ್, ಕಿರಿಯ ಮಹಿಳೆಯರು ಮತ್ತು ಪುರುಷರ ಕುಸ್ತಿ ಪಂದ್ಯಾವಳಿಗಳಲ್ಲಿ ರಿತಿಕಾ ಫೋಗಟ್ ಆಡುತ್ತಿದ್ದರು.

ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾವೀರ್ ಸಿಂಗ್ ಫೋಗಟ್ ಅವರ ಅಡಿಯಲ್ಲಿ ತರಬೇತಿ ಪಡೆದಿದ್ದ ರಿತಿಕಾ ಅವರ ಸೋದರಿ ರಿತು ಫೋಗಟ್ ಒನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿದ್ದರೆ, ಸೋದರಸಂಬಂಧಿ ವಿನೇಶ್ ಫೋಗಟ್ ಸಕ್ರಿಯ ಫ್ರೀಸ್ಟೈಲ್ ಕುಸ್ತಿಪಟು ಮತ್ತು ಟೋಕಿಯೊ ಒಲಿಂಪಿಕ್ಸ್ 2021 ರ ಭಾರತದ ಪ್ರಮುಖ ಕ್ರೀಡಾಪಟುವಾಗಿದ್ದಾರೆ.

ಇದಲ್ಲದೆ ಗೀತಾ ಮತ್ತು ಬಬಿತಾ ಫೋಗಾಟ್ ಅವರ ಸ್ಪೂರ್ತಿದಾಯಕ ಜೀವನವು ಭಾರತದ ಕುಸ್ತಿ ಅಭಿಮಾನಿಗಳಿಗೆ ಚಿರಪರಿಚಿತವಾಗಿದ್ದು ಇದೇ ಕಥಾನಕ ಒಳಗೊಂಡ ‘ದಂಗಲ್’ ಚಿತ್ರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು.

- Advertisement -

Latest News

error: Content is protected !!