Saturday, June 13, 2026
Homeಕರಾವಳಿಬೆಳ್ತಂಗಡಿ: ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ನೂತನ ಅಧ್ಯಕ್ಷರಾಗಿ ನವೀನ್ ಚಂದ್ರ ಕಜೆಕಾರ್ ಆಯ್ಕೆ

ಬೆಳ್ತಂಗಡಿ: ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ನೂತನ ಅಧ್ಯಕ್ಷರಾಗಿ ನವೀನ್ ಚಂದ್ರ ಕಜೆಕಾರ್ ಆಯ್ಕೆ

- Advertisement -
- Advertisement -

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ನೂತನ ಅಧ್ಯಕ್ಷರಾಗಿ ಉಜಿರೆ ಕಜೆಕಾರ್ ಮೆಡಿಕಲ್ಸ್‌ನ ನವೀನ್ ಚಂದ್ರ ಆಯ್ಕೆಯಾಗಿದ್ದಾರೆ.

ಉಜಿರೆಯಲ್ಲಿ ನಡೆದ ಸಂಘದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಉಜಿರೆ ಸುರಕ್ಷಾ ಮೆಡಿಕಲ್ಸ್ ನ ಶ್ರೀಧರ್ ಕೆ.ವಿ., ಕೋಶಾಧಿಕಾರಿಯಾಗಿ ಬೆಳ್ತಂಗಡಿ ಅಮರ್ ಡ್ರಗ್ ಹೌಸ್‌ನ ಗಣಪತಿ ಭಟ್, ಉಪಾಧ್ಯಕ್ಷರಾಗಿ ಬೆಳ್ತಂಗಡಿ ಅಶ್ವಿನಿ ಮೆಡಿಕಲ್ಸ್ ನ ಎಂ.ಚಂದ್ರಶೇಖರ್ ಆಯ್ಕೆಯಾಗಿದ್ದಾರೆ.

ಕಾರ್ಯಾಕಾರಿ ಸಮಿತಿ ಸದಸ್ಯರುಗಳಾಗಿ ದಿನೇಶ್ ಮೆಡಿಕೇರ್ ಮೆಡಿಕಲ್ಸ್ ಕಕ್ಕಿಂಜೆ, ರಮಾನಂದ ಬಿ.ಎಂ. ಮೆಡಿಕಲ್ಸ್ ಉಜಿರೆ, ಪ್ರಕಾಶ್ ಮಹಾಗಣಪತಿ ಎಂಟರ್ ಪ್ರೈಸಸ್ ಬೆಳ್ತಂಗಡಿ, ರಘುನಾಥ ದಾಮ್ಲೆ ವಿನಯ ಮೆಡಿಕಲ್ಸ್ ಅಳದಂಗಡಿ, ಡಾ.ಧರಣೇಂದ್ರ ಜೈನ್ ಶಾರದಾ ಮೆಡಿಕಲ್ಸ್ ಕಾಯರ್ತಡ್ಕ, ರಮೇಶ್ ಬೆಸ್ಟ್ ಮೆಡಿಕಲ್ಸ್ ಗೇರುಕಟ್ಟೆ, ಉದಯ ಕುಮಾರ್ ಮಹಾವೀರ ಮೆಡಿಕಲ್ಸ್ ಮಡಂತ್ಯಾರ್ ಆಯ್ಕೆಯಾಗಿದ್ದಾರೆ.

- Advertisement -

Latest News

error: Content is protected !!