Saturday, June 28, 2025
Homeತಾಜಾ ಸುದ್ದಿಅಣ್ಣನ ಮದುವೆಯ ವೀಡಿಯೋ ಶೂಟ್ ಗೆ ಬಂದ ವೀಡಿಯೋಗ್ರಾಫರ್ ಜೊತೆ ತಂಗಿ ಪರಾರಿ

ಅಣ್ಣನ ಮದುವೆಯ ವೀಡಿಯೋ ಶೂಟ್ ಗೆ ಬಂದ ವೀಡಿಯೋಗ್ರಾಫರ್ ಜೊತೆ ತಂಗಿ ಪರಾರಿ

spot_img
- Advertisement -
- Advertisement -

ಪಾಟ್ನಾ : ಅಣ್ಣನ ಮದುವೆಯ ವೀಡಿಯೋ ಶೂಟ್ ಗೆ ಬಂದ ವೀಡಿಯೋಗ್ರಾಫರ್ ಜೊತೆ ತಂಗಿ ಪರಾರಿಯಾದ ಘಟನೆ ಬಿಹಾರದ ಮುಜಾಫುರ್ ನ ಅಹಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಂದವಾರ ಘಾಟ್ ದಾಮೋದರಪುರ ಗ್ರಾಮದಲ್ಲಿನಡೆದಿದೆ.

ಯುವಕನೊಬ್ಬನ ಮದುವೆ ದೃಶ್ಯ ಸೆರೆ ಹಿಡಿಯಲು ಬಂದಿದ್ದ ವೀಡಿಯೊಗ್ರಾಫರ್, ವರನ ಅಪ್ರಾಪ್ತ ತಂಗಿಯ ಜತೆ ಮಾತಾಡಿದ್ದಾನೆ. ಇಬ್ಬರ ನಡುವೆ ಸಲುಗೆ ಬೆಳೆದಿದೆ. ಇತ್ತ ಮದುವೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ವೀಡಿಯೋಗ್ರಾಫರ್ ಜತೆ ವರನ ತಂಗಿ ಓಡಿಹೋಗಿದ್ದಾಳೆ.

ವಿವಾಹ ಮುಗಿಯುತ್ತಿದ್ದಂತೆ ವರನ ಸಹೋದರಿ ಎಲ್ಲೂ ಕಾಣದೇ ಇರುವ ಕಾರಣ ಗಾಬರಿಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ವಿಡಿಯೋಗ್ರಾಫರ್ ಕೂಡ ನಾಪತ್ತೆಯಾಗಿರುವುದು ಗೊತ್ತಾಗಿದೆ. ಹೆಚ್ಚಿನ ತನಿಖೆ ನಡೆಸಿದಾಗ ವೀಡಿಯೊಗ್ರಾಫರ್ ಯುವಕ ವರನ ಅಪ್ರಾಪ್ತ ಸಹೋದರಿಯೊಂದಿಗೆ ಪರಾರಿಯಾಗಿರುವುದು ತಿಳಿದುಬಂದಿದೆ. ನಂತರ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!