Thursday, June 25, 2026
Homeಕರಾವಳಿಉಡುಪಿಶಾಸಕರ ಭವನದಲ್ಲಿ‌ ಪೊರಕೆ ಹಿಡಿದು ಗುಡಿಸುತ್ತಿರುವ ಕುಂದಾಪುರ ಶಾಸಕರ ಫೋಟೋ ವೈರಲ್: ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರ...

ಶಾಸಕರ ಭವನದಲ್ಲಿ‌ ಪೊರಕೆ ಹಿಡಿದು ಗುಡಿಸುತ್ತಿರುವ ಕುಂದಾಪುರ ಶಾಸಕರ ಫೋಟೋ ವೈರಲ್: ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರ ಸರಳತೆ, ಪ್ರಾಮಾಣಿಕತೆಗೆ ಸಿಗುತ್ತಾ ಮಂತ್ರಿಗಿರಿ

- Advertisement -
- Advertisement -

ಬೆಂಗಳೂರು: ಮೊದಲ ಬಾರಿ‌ ಶಾಸಕರಾದರೂ ಮಂತ್ರಿ ಗಿರಿ‌ ಬೇಕು‌ ಅಂತಾ ನಾನಾ ಸರ್ಕಸ್ ಮಾಡುವ ಶಾಸಕರ ಮಧ್ಯೆ‌ ಭಿನ್ನವಾಗಿ‌ ನಿಲ್ಲುವವರು ಕುಂದಾಪುರದ ಶಾಸಕ ಹಾಲಾಡಿ‌ ಶ್ರೀನಿವಾಸ ಶೆಟ್ಟಿ.

ಇದೀಗ ಶಾಸಕರ ಭವನದ ತನ್ನ ರೂಮಿನ ಹೊರಗಡೆ ಹೀಗೆ ಇಲ್ಲಿ ಪೊರಕೆ ಹಿಡಿದು ಕಸ ಗುಡಿಸುತ್ತಿರುವುದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಫೋಟೋವೊಂದು‌ ವೈರಲ್‌‌ ಆಗಿದ್ದು
ಶಾಸಕರ ಸರಳತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಬಹುತೇಕ ಶಾಸಕರು ಮಂತ್ರಿಗಿರಿಗಾಗಿ ಪಕ್ಷದ ಪ್ರಮುಖರ ಮನೆಯ ಮೆಟ್ಟಿಲು ಹತ್ತಿ ಇಳಿಯುತ್ತಿರುವ ಹೊತ್ತಿಗೆ ಹಾಲಾಡಿಯವರು ತಾನು ತನ್ನ ಪಾಡಿಗೆ ಶಾಸಕರ ಭವನದಲ್ಲಿ ಕುಳಿತು ಸಾರ್ವಜನಿಕರ ಫೈಲ್ ಹಿಡಿದು ಕುಳಿತಿದ್ದಾರೆ. ಸರಳ, ಸಜ್ಜನ ಎನ್ನುವುದೆಲ್ಲಾ ಡ್ರಾಮಾ ಆಗುತ್ತಿರುವ ಈ ದಿನಗಳಲ್ಲಿ ನೈಜ ಜನನಾಯಕನನ್ನು ಗುರುತಿಸಿ ಮಂತ್ರಿಗಿರಿ ಕೊಡ್ತಾರಾ ಅಂತಾ ಅವರ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

- Advertisement -

Latest News

error: Content is protected !!