Thursday, June 4, 2026
Homeತಾಜಾ ಸುದ್ದಿಹೋಮ್ ಮಿನಿಸ್ಟರ್ ಆಗೋಕೆ ಲಾಯಕ್ ಏನ್ರಿ ಇವರು? ಸಿದ್ದರಾಮಯ್ಯ ವಾಗ್ದಾಳಿ

ಹೋಮ್ ಮಿನಿಸ್ಟರ್ ಆಗೋಕೆ ಲಾಯಕ್ ಏನ್ರಿ ಇವರು? ಸಿದ್ದರಾಮಯ್ಯ ವಾಗ್ದಾಳಿ

- Advertisement -
- Advertisement -

ಹುಬ್ಬಳ್ಳಿ : ಗೌರಿಪಾಳ್ಯ ಚಂದ್ರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ಇರಲಿ ಅವರ ವಿರುದ್ಧ ಕ್ರಮ ಆಗಲಿ. ಉರ್ದು ಬರಲ್ಲ ಅನ್ನೋ ಕಾರಣಕ್ಕೆ ಹತ್ಯೆ ಆಗಿದೆ ಎಂಬ ಗೃಹ ಸಚಿವರ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಹೋಮ್ ಮಿನಿಸ್ಟರ್ ಗೆ ಅನುಭವವೇ ಇಲ್ಲ, ಆರಗ ಜ್ಞಾನೇಂದ್ರಗೆ ಇಲಾಖೆ ಹ್ಯಾಂಡಲ್ ಮಾಡೋಕೆ ಬರ್ತಿಲ್ಲ ಅಂತ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಯಾರದ್ದೇ ಕೊಲೆಯಾದ್ರು ನಾನು ಖಂಡಿಸುತ್ತೇನೆ, ಹಿಂದೂ ಸತ್ರು ಜೀವ, ಮುಸ್ಲಿಂ ಸತ್ರೂ ಜೀವವೇ ನರಗುಂದದಲ್ಲಿ ಮುಸ್ಲಿಂ ಹತ್ಯೆ ಆದಾಗ ಯಾಕೆ 25 ಲಕ್ಷ ಕೊಟ್ಟಿಲ್ಲ.? ಹರ್ಷಾ ಕೊಂದವರನ್ನ ನೇಣಿಗೆ ಹಾಕಿ ಜೀವಾವಧಿ ಶಿಕ್ಷೆ ಕೊಡಿಸಿ. ಹಾಗೆ ಮುಸ್ಲಿಂ ಯುವಕರ ಹತ್ಯೆಯಾದವರಿಗೂ ಶಿಕ್ಷೆಯಾಗಲಿ ಅಂತ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಮೈಸೂರಲ್ಲಿ ಗ್ಯಾಂಗ್ ರೇಪ್ ಆದಾಗ ಗೃಹ ಸಚಿವರು ಅಷ್ಟೊತ್ತಿನಲ್ಲಿ ಅಲ್ಲಿಗೆ ಯಾಕ್ ಹೋಗಿದ್ರು ಅಂತ ಹೇಳಿಕೆ ಕೊಟ್ರು. ಹೋಮ್ ಮಿನಿಸ್ಟರ್ ಆಗೋಕೆ ಲಾಯಕ್ ಏನ್ರಿ ಇವರು.. ಜವಾಬ್ದಾರಿಯುತ ಸಚಿವರೇ ಕೋಮುವಾದಕ್ಕೆ ಕುಮ್ಮಕ್ಕು ಕೊಡ್ತಿದಾರೆ. ಸ್ವತಃ ಮುಖ್ಯಮಂತ್ರಿಗಳೇ ಕ್ರಿಯೆಗೆ ಪ್ರತಿಕ್ರಿಯೆ ನಡೆಯುತ್ತೆ ಅಂತ ಹೇಳಿ ಕುಮ್ಮಕ್ಕು ಕೊಡ್ತಾರೆ ಅಂತ ಸಿಎಂ ವಿರುದ್ಧವೂ ವಾಗ್ದಾಳಿ ನಡೆಸಿದ್ರು.

- Advertisement -

Latest News

error: Content is protected !!