Tuesday, June 6, 2023
Homeತಾಜಾ ಸುದ್ದಿಬಾದಾಮಿಯಿಂದಲೇ ಸ್ಪರ್ಧಿಸ್ತಾರಾ ವಿಪಕ್ಷ ನಾಯಕ ಸಿದ್ದರಾಮಯ್ಯ; ಕುತೂಹಲ ಮೂಡಿಸಿದ ಮಾಜಿ ಸಿಎಂ ಬಾದಾಮಿ ಪ್ರವಾಸ

ಬಾದಾಮಿಯಿಂದಲೇ ಸ್ಪರ್ಧಿಸ್ತಾರಾ ವಿಪಕ್ಷ ನಾಯಕ ಸಿದ್ದರಾಮಯ್ಯ; ಕುತೂಹಲ ಮೂಡಿಸಿದ ಮಾಜಿ ಸಿಎಂ ಬಾದಾಮಿ ಪ್ರವಾಸ

- Advertisement -
- Advertisement -

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸ್ತಾರೆ ಅನ್ನೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹೀಗಿರುವಾಗಲೇ ಮಾ.24 ರಂದು ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಪ್ರವಾಸ ಕೈಗೊಂಡಿದ್ದಾರೆ.

ಮಾ.24 ರಂದು ಬಾದಾಮಿಯಲ್ಲಿ ವಿವಿಧ ಕಾಮಗಾರಿಗಳ ನೆಪ ಮಾಡಿಕೊಂಡು ಸಿದ್ದರಾಮಯ್ಯ ಬಾದಾಮಿ ಪ್ರವಾಸ ಕೈಗೊಂಡಿದ್ದಾರೆ. ವರುಣಾ, ಕೋಲಾರ ಎಲ್ಲಾ ಬಿಟ್ಟು ಬಾದಾಮಿಯತ್ತ ಸಿದ್ದರಾಮಯ್ಯ ಮನಸ್ಸು ಮಾಡಲಿದ್ದಾರಾ ಎಂಬ ಕುತೂಹಲ ಮೂಡಿದೆ. ಜನರ ಮನಸ್ಸನ್ನು ಅರಿಯಲು ಸಿದ್ದರಾಮಯ್ಯ ಮಾ.24 ರಂದು ಬಾದಾಮಿ ಟೂರ್ ಕೈಗೊಂಡಿದ್ದಾರೆ. ಹಾಗಾಗಿ ಆ ಬಳಿಕ ಕ್ಷೇತ್ರ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

- Advertisement -

Latest News

error: Content is protected !!