Tuesday, June 6, 2023
Homeಕರಾವಳಿಬೆಳ್ತಂಗಡಿ : ಧರ್ಮಸ್ಥಳಕ್ಕೆ ಬಂದಿದ್ದ ಯುವತಿ ನಾಪತ್ತೆ: ಧರ್ಮಸ್ಥಳ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು

ಬೆಳ್ತಂಗಡಿ : ಧರ್ಮಸ್ಥಳಕ್ಕೆ ಬಂದಿದ್ದ ಯುವತಿ ನಾಪತ್ತೆ: ಧರ್ಮಸ್ಥಳ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ : ಕುಟುಂಬಸ್ಥರ ಜೊತೆ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಬಂದಿದ್ದ. ದೇವರ ದರ್ಶನ ಬಳಿಕ ಎಲ್ಲರೂ ರೂಂ ಹೋಗಿದ್ದ ನಂತರ ರಾತ್ರಿ ಏಕಾಏಕಿ ಯುವತಿ ನಾಪತ್ತೆಯಾದ ಘಟನೆ ನಡೆದಿದ್ದು.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಕುಮಟಾದಿಂದ ರೈಲಿನ ಮೂಲಕ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಮಾ.20 ರಂದು ಕುಟುಂಬ ಸಮೇತ ಬಂದಿದ್ದು ಮಾ.21 ರಂದು ದೇವರ ದರ್ಶನ ಬಳಿಕ ಧರ್ಮಸ್ಥಳಕ್ಕೆ ಬಸ್ ಮೂಲಕ ಬಂದು ದೇವರ ದರ್ಶನ ಪಡೆದ ಬಳಿಕ ರಾತ್ರಿ 8:45 ಕ್ಕೆ ವಸತಿ ಗೃಹದಲ್ಲಿ ರೂಂ ಮಾಡಿದ್ದರು. ಈ ವೇಳೆ ಯುವತಿ ರೂಂ ನ ಹೊರಾಂಡದಲ್ಲಿ ಸುತ್ತಾಡುತ್ತಿದ್ದಳು ಬಳಿಕ ಏಕಾಏಕಿ ರೇಷ್ಮಾ (23) ನಾಪತ್ತೆಯಾಗಿದ್ದಾಳೆ. ರಾತ್ರಿ ಕುಟುಂಬದವರು ರೂಂ ನಲ್ಲಿ ಉಳಿದು ಮಾ.22 ರಂದು ರೇಷ್ಮಾ ಮನೆಯವರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ಮನೆಗೂ ಬಂದಿಲ್ಲ ಎಂದು ತಿಳಿಸಿದ ಬಳಿಕ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ.

ಉತ್ತರ ಕ‌ನ್ನಡ ಜಿಲ್ಲೆಯ ಮಿರ್ಜಾನ್ ,ದೇವಸ್ಥಾನ ಕೇರಿಯ ಹರಿಹರ ಕೃಪಾ ನಿವಾಸಿ ರೇಷ್ಮಾ.ಆರ್.ನಾಯ್ಕ್ (23) ಎಂಬಾಕ್ಕೆ ನಾಪತ್ತೆಯಾದ ಯುವತಿ. ಯುವತಿ ನಾಪತ್ತೆಯಾದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಯುವತಿಯ ಅಜ್ಜಿ ಸುಮಿತ್ರಾ ಎಂಬವರು ದೂರು ನೀಡಿದ್ದಾರೆ.

- Advertisement -

Latest News

error: Content is protected !!