Friday, June 5, 2026
Homeಕರಾವಳಿಮಂಗಳೂರುಮಂಗಳೂರು: ಮಹಿಳೆ ಬಳಿ ಹಣ ಪೀಕಿದ ಇನ್ಸ್ಪೆಕ್ಟರ್ ಗೆ ಮಹಿಳಾ ಠಾಣೆಗೆ ಪೋಸ್ಟಿಂಗ್; ನ್ಯಾಯ ಕೊಡಿಸಿ...

ಮಂಗಳೂರು: ಮಹಿಳೆ ಬಳಿ ಹಣ ಪೀಕಿದ ಇನ್ಸ್ಪೆಕ್ಟರ್ ಗೆ ಮಹಿಳಾ ಠಾಣೆಗೆ ಪೋಸ್ಟಿಂಗ್; ನ್ಯಾಯ ಕೊಡಿಸಿ ಅಂತಾ ಕಣ್ಣೀರು ಹಾಕ್ತಿದ್ದಾರೆ ಸಂತ್ರಸ್ತೆ ಮೀನಾಕ್ಷಿ

- Advertisement -
- Advertisement -

ಮಂಗಳೂರು: ಮಹಿಳೆ ಬಳಿ ಹಣ ಪೀಕಿದ ಉಳ್ಳಾಲ ಇನ್ಸ್ಪೆಕ್ಟರ್ ಅಗಿದ್ದ  ಬಾಲಕೃಷ್ಣ‌ ಅವರನ್ನು ಮಂಗಳೂರು ಮಹಿಳಾ ಠಾಣೆಗೆ ಪೋಸ್ಟಿಂಗ್ ಮಾಡಲಾಗಿದ್ದು ಇವರಿಂದ ಅನ್ಯಾಯಕ್ಕೆ ಒಳಗಾದ ಮಹಿಳೆ ಇದೀಗ ನ್ಯಾಯ ಕೊಡಿಸಿ ಅಂತಾ ಕಣ್ಣೀರು ಹಾಕ್ತಿದ್ದಾರೆ.ಉಳ್ಳಾಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದ ಬಾಲಕೃಷ್ಣ ಸಿಎಂ ಪದಕ ಪಡೆದವರು. ಆದರೆ ಮಾಡ್ತಿರೋದು ಮಾತ್ರ ಬರೀ ಹಲ್ಕಾ ಕೆಲಸ. ಕೋಟೆಕಾರು ಬ್ಯಾಂಕ್ ರಾಬರಿ ಪ್ರಕರಣದಲ್ಲಿ ಬ್ಯಾಂಕ್ ಕಡೆಯವರಿಂದ 8 ಲಕ್ಷ ಪೀಕಿದ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ಬ್ಯಾಂಕ್ ನವರಿಂದ ಹಣಕ್ಕೆ ಬೇಡಿಕೆ ಇಟ್ಟು ಹಣ ಪಡೆದ ಹಿನ್ನೆಲೆ ಕಡ್ಡಾಯ ರಜೆ ಕೊಡಲಾಗಿತ್ತು.

ಇನ್ನು ಇದೇ ಬಾಲಕೃಷ್ಣ ಅವರು ಮೊದಲು ಬೆಳ್ತಂಗಡಿಯ ಮೀನಾಕ್ಷಿ ಬಳಿ 3 ಲಕ್ಷ ಹಣ ವಸೂಲಿ ಮಾಡಿದ್ದರು. ಈ ವಿಚಾರದ ಬಗ್ಗೆ ಮೀನಾಕ್ಷಿ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ಲಿಖಿತ ದೂರು ನೀಡಿದ್ದಾರೆ.ಆದರೂ ನಂತರ  ಮಂಗಳೂರು ಮಹಿಳಾ ಠಾಣೆಗೆ ಪೋಸ್ಟಿಂಗ್ ಮಾಡಲಾಗಿತ್ತು.

ಇಷ್ಟೇ ಅಲ್ಲದೇ ಬಾಲಕೃಷ್ಣ ಕಳ್ಳತನದ ಪ್ರಕರಣದ ಎಲ್ಲಾ ಆರೋಪಿಗಳಿಂದ ಹಣ ಪೀಕಿರೋ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮೀನಾಕ್ಷಿ ಅವರ ಮಗ ಸೇರಿ ಐವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದರು.ಈ ವೇಳೆ ಉಳ್ಳಾಲ ಪೊಲೀಸ್ ಇನ್ಸ್ಪೆಕ್ಟರ್ ಬಾಲಕೃಷ್ಣ ಎಲ್ಲಾ ಐವರು ಆರೋಪಿಗಳ ಮನೆಯವರಿಂದ ಹಣ ಪೀಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೀನಾಕ್ಷಿ ಅವರಿಂದಲೂ ಹಣ ಪಡೆದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 

ಬಾಲಕೃಷ್ಣ ಹಣ ಕೇಳುತ್ತಿದ್ದಂತೆ ಮೀನಾಕ್ಷಿ ಹೆರಿಗೆಗೆ ತವರಿಗೆ ಬಂದಿದ್ದ ಮಗಳ ಚಿನ್ನ ಬೆಳ್ತಂಗಡಿ ಮಣಪುರಂ ಫೈನಾನ್ಸ್ ನಲ್ಲಿ ಅಡವಿಟ್ಟು ಲಂಚ ಕೊಟ್ಟಿದ್ದರು. ಮಗಳ ಚಿನ್ನಾಭರಣ ಅಡವಿಟ್ಟು ಮೀನಾಕ್ಷಿ ಪಿಐ ಗೆ 3 ಲಕ್ಷ ಹಣ ಕೊಟ್ಟಿದ್ದರು. ಉಳ್ಳಾಲ ಪೊಲೀಸ್ ಠಾಣೆಗೆ ಹೋಗಿ ಹಣ ಕೊಟ್ಟೆ ಅಂತಾ ಮೀನಾಕ್ಷಿ ಹೇಳಿದ್ದಾರೆ. 3 ಲಕ್ಷ ಕೊಟ್ಟರು ಕೂಡ ಇದು ಸಾಕಾಗಲ್ಲ ಅಂತಾ ಬಾಲಕೃಷ್ಣ ಬೇಡಿಕೆ ಇಟ್ಟಿದ್ರು. ಮಗನ ಮೈಮೇಲಿದ್ದ 50 ಗ್ರಾಂ ಚಿನ್ನ ಕಸಿದಿದ್ದಾರೆ. ಬಂಧನ ವೇಳೆ ಚಿನ್ನ ವಶಪಡಿಸಿಕೊಂಡಿದ್ದನ್ನು ದಾಖಲೆಯಲ್ಲಿ ತೋರಿಸಿಲ್ಲ ಎಂದಿದ್ದಾರೆ. ಹಣ ಮತ್ತು ಚಿನ್ನದ ಬಗ್ಗೆ ನನ್ನಲ್ಲಿ ದಾಖಲೆ ಇದೆ. ಅವನ್ನೆಲ್ಲ ಎ.12 ರಂದು ನಡೆಯುವ ತನಿಖೆಗೆ ಹಾಜರುಪಡಿಸುತ್ತಾರೆ ಮಹಿಳೆ. ಇತ್ತ ಈಗ ಮಗಳ ಸಂಸಾರ ಹಾಳಾಗುತ್ತಿದೆ.ಅವಳ ಚಿನ್ನವನ್ನು ಬಿಡಿಸಿ ಗಂಡನ ಮನೆಗೆ ಕಳುಹಿಸಬೇಕು.ಪೊಲೀಸ್ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಹಣ ಚಿನ್ನ ಕೊಡಸುವಂತೆ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!