Sunday, June 7, 2026
Homeತಾಜಾ ಸುದ್ದಿಮುದ್ದಿನ ನಾಯಿಯನ್ನು ಕಳೆದುಕೊಂಡ ಶುಭಾ ಪೂಂಜಾ

ಮುದ್ದಿನ ನಾಯಿಯನ್ನು ಕಳೆದುಕೊಂಡ ಶುಭಾ ಪೂಂಜಾ

- Advertisement -
- Advertisement -

ಬೆಂಗಳೂರು: ಕನ್ನಡ ಚಿತ್ರರಂಗದ ಗ್ಲ್ಯಾಮರ್ ಗೊಂಬೆ ಶುಭ ಪೂಂಜಾ ತನ್ನ ಪ್ರೀತಿಯ ಸಾಕು ನಾಯಿಯನ್ನು ಕಳೆದುಕೊಂಡಿದ್ದಾರೆ . ಕೊರೊನಾ ಲಾಕ್‍ಡೌನ್ ನಿಂದಾಗಿ ಮನೆಯಲ್ಲೇ ಇರುವ ಶುಭ ಪೂಂಜಾ ತಮ್ಮ ಪ್ರೀತಿಯ ನಾಯಿಯೊಂದಿಗೆ ಕಾಲ ಕಳೆಯುತ್ತಿದ್ದರು. ಆದರೆ ಇದೇ ಸಮಯದಲ್ಲಿ ನಾಯಿ ಸಾವನ್ನಪ್ಪಿರುವುದು ಶುಭ ಅವರಿಗೆ ತೀವ್ರ ಬೇಸರವನ್ನುಂಟುಮಾಡಿದೆ.

ನಾಯಿಯನ್ನು ಕಳೆದುಕೊಂಡ ದುಃಖದಲ್ಲಿ ಶುಭ ಪೂಂಜ ಕೊರಗುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವ ಶುಭಾ, ನನ್ನ ಜಗತ್ತನ್ನು ಕಳೆದುಕೊಂಡಿದ್ದೇನೆ. ನನಗೆ ಇವನೇ ಒಂದು ಜಗತ್ತು ಆಗಿದ್ದ. ಸ್ನೇಹಿತರೆ ನಿಮಗೆ ಗೊತ್ತಾ, ಇವನು ಇನ್ನಿಲ್ಲ. ಆದರೆ ಇವನು ಯಾವಾಗಲೂ, ಪ್ರತಿ ಸೆಕೆಂಡ್ ನನ್ನ ಜೊತೆಗೆ ಇರುತ್ತಾನೆ ಎಂದು ಬರೆದುಕೊಂಡಿದ್ದಾರೆ.

ಈ ಕುರಿತು ನಟಿ ಐಂದ್ರಿತಾ ರೇ ಕಮೆಂಟ್ ಮಾಡಿ ಸಮಾಧಾನ ಹೇಳಿದ್ದು, ಹೋ ಡಿಯರ್ ಟೇಕ್ ಕೇರ್ ಶುಭ, ನಮ್ಮ ಜೀವನದಲ್ಲಿ ಇದು ಬಹುದೊಡ್ಡ ನಷ್ಟ. ನಿನಗಾಗಿರುವ ನಷ್ಟ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ನನಗೆ ತಿಳಿದಿದೆ. ಟೇಕ್ ಕೇರ್ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಕೆಲವು ನಟ, ನಟಿಯರು ಸಹ ಕಮೆಂಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಲಾಕ್‍ಡೌನ್ ವೇಳೆ ಮನೆಯಲ್ಲಿರದೆ ಶುಭ ಪೂಂಜಾ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಬಡವರಿಗೆ, ನಿರ್ಗತಿಕರಿಗೆ ಆಹಾರದ ಕಿಟ್ ನೀಡುತ್ತಿದ್ದಾರೆ. ತಮ್ಮದೇ ಟೀಮ್ ಕಟ್ಟಿಕೊಂಡು ಉಡುಪಿಯ ಕಾಪು ಸುತ್ತಲಿನ ಪ್ರದೇಶಗಳಲ್ಲಿನ ಬಡವರಿಗೆ ಆಹಾರದ ಕಿಟ್ ವಿತರಿಸುತ್ತಿದ್ದಾರೆ. ತಮ್ಮ ಎಲ್ಲ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಡೇಟ್ ನೀಡುತ್ತಿದ್ದಾರೆ.

- Advertisement -

Latest News

error: Content is protected !!