Saturday, June 6, 2026
Homeಇತರಶಿಡ್ಲಘಟ್ಟ: ಧರ್ಮಸ್ಥಳ ಗ್ರಾ.ಯೋ ವತಿಯಿಂದ 72 ಬಡ ಹೋಮ್ ಗಾರ್ಡ್ಸ್ ಕುಟುಂಬಗಳಿಗೆ ಕಿಟ್ ವಿತರಣೆ

ಶಿಡ್ಲಘಟ್ಟ: ಧರ್ಮಸ್ಥಳ ಗ್ರಾ.ಯೋ ವತಿಯಿಂದ 72 ಬಡ ಹೋಮ್ ಗಾರ್ಡ್ಸ್ ಕುಟುಂಬಗಳಿಗೆ ಕಿಟ್ ವಿತರಣೆ

- Advertisement -
- Advertisement -

ಶಿಡ್ಲಘಟ್ಟ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್ ಎಲ್ ಮಂಜುನಾಥ್ ರವರ ಮಾರ್ಗದರ್ಶನದಲ್ಲಿ, ಹಾಗೆಯೆ ಮಾನ್ಯ ಪ್ರಾದೇಶಿಕ ನಿರ್ದೇಶಕರು ಹಾಗೂ ಜಿಲ್ಲಾ ನಿರ್ದೇಶಕ ರ ಸಹಕಾರದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಶ್ರಮಿಸುತ್ತಿರುವ 72 ಹೋಮ್ ಗಾರ್ಡ್ಸ್ ಬಡ ಕುಟುಂಬಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ವತಿಯಿಂದ 35000 ಮೊತ್ತದ ಜೀವನಾವಶ್ಯಕ ಆಹಾರ ವಸ್ತುಗಳ ಕಿಟ್ ವಿತರಣೆ ಮಾಡಲಾಯಿತು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮಾಜಿ ಸಚಿವರಾದ ವಿ.ಮುನಿಯಪ್ಪˌ ಮಾನ್ಯ ತಹಶೀಲ್ದಾರ್ ಅರುಂಧತಿˌ ಇಒ ಹಾಗೂ ಜಿಲ್ಲಾ ಹೋಮ್ ಗಾರ್ಡ್ಸ್ ಕಮಾಂಡೆಂಟ್ ಮತ್ತು ಜಿಲ್ಲಾ ನಿರ್ದೇಶಕರು ಜನಜಾಗ್ರತಿ ವೇದಿಕೆ ಸದಸ್ಯರು ಒಕ್ಕೂಟದ ಪದಾಧಿಕಾರಿಗಳುˌ ಯೋಜನಾಧಿಕಾರಿˌ ಯೋಜನೆಯ ಮೇಲ್ವಿಚಾರಕರುˌ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ಕ್ಯಾನ್ಸರ್ ರೋಗಿಗೆ ಸಹಾಯ ಹಸ್ತ

ಈ ಸಂದರ್ಭದಲ್ಲಿ ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಳ್ಳೂರಿನ ರತ್ನಮ್ಮರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ವತಿಯಿಂದ 40000 ಸಹಾಯಧನ ವಿತರಣೆ ಮಾಡಲಾಯಿತು.

- Advertisement -

Latest News

error: Content is protected !!