Thursday, May 9, 2024
Homeಕರಾವಳಿಬೆಳ್ತಂಗಡಿ: ಶ್ರೀಮಹಾಗಣಪತಿ ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಹಿನ್ನೆಲೆ: ಇಂದು (ಜ.13) ಚಪ್ಪರ ಮುಹೂರ್ತ ಹಾಗೂ...

ಬೆಳ್ತಂಗಡಿ: ಶ್ರೀಮಹಾಗಣಪತಿ ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಹಿನ್ನೆಲೆ: ಇಂದು (ಜ.13) ಚಪ್ಪರ ಮುಹೂರ್ತ ಹಾಗೂ ಕಾರ್ಯಾಲಯ ಉದ್ಘಾಟನೆ

spot_img
- Advertisement -
- Advertisement -

ಬೆಳ್ತಂಗಡಿ: ನವೀಕರಣಗೊಳ್ಳುತ್ತಿರುವ ಅಳದಂಗಡಿಯ ಪ್ರಸಿದ್ಧ ಶ್ರೀಮಹಾಗಣಪತಿ ದೇವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಫೆ.4 ರಿಂದ 9 ರವರೆಗೆ ನಡೆಯಲಿದ್ದು ಪೂರ್ವಭಾವಿಯಾಗಿ ಚಪ್ಪರ ಮುಹೂರ್ತ ಹಾಗೂ ಕಾರ್ಯಾಲಯ ಉದ್ಘಾಟನೆ ಜ.13 ರಂದು ನೆರವೇರಿತು.

ಕಂಬವನ್ನು ನೆಟ್ಟು ಚಪ್ಪರ‌ಕಾರ್ಯಕ್ಕೆ ಉದ್ಯಮಿ ಹರೀಶ್ ಶೆಟ್ಟಿ ಕರ್ಬಿತ್ತಿಲ್ ಚಾಲನೆ ನೀಡಿದರೆ, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಸಂಚಾಲಕ ಶಿವಪ್ರಸಾದ ಅಜಿಲ ಕಾರ್ಯಾಲಯವನ್ನು ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅನ್ನದಾನ, ತಾಮ್ರಕಲಶ, ದ್ರವ್ಯಕಲಶಗಳ ಕೂಪನ್‌ಗಳನ್ನು ಹಾಗೂ ಪ್ರಚಾರ ಸಾಹಿತ್ಯವನ್ನು ಬಿಡುಗಡೆಗೊಳಿಸಲಾಯಿತು.

ಬ್ರಹ್ಮ‌ಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ  ಸದಾನಂದ ಉಂಗಿಲಬೈಲು, ಪ್ರಧಾನ‌ಕಾರ್ಯದರ್ಶಿ ಸಂತೋಷ್ ಕಾಪಿನಡ್ಕ,   ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ‌ ಮಿತ್ತಮಾರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾl ಶಶಿಧರ ಡೋಂಗ್ರೆ, ಪ್ರಧಾನ‌ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ, ಕೋಶಾಧಿಕಾರಿ ಅನಿಲ್ ಕುಮಾರ್, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ನವೀನ್ ಸಾಮನಿ, ನಿರಂಜನ ಜೋಶಿ, ವಿಶ್ವನಾಥ ಹೋಳ್ಳ, ಜಗನ್ನಾಥ ಶೆಟ್ಟಿ, ಸೋಮನಾಥ ಬಂಗೇರ ವರ್ಪಾಳೆ, ದೇವಿಪ್ರಸಾದ್ ಶೆಟ್ಟಿ , ಯಶೋಧರ ಸುವರ್ಣ, ರಾಜಿತ್ ರೈ, ಚಂದ್ರಶೇಖರ , ಹರೀಶ್ ಆಚಾರ್ಯ, ಕೃಷ್ಣಪ್ಪ ಬಿಕ್ಕಿರ, ವಿಜಯಕುಮಾರ್ ನಾವರ, ದೀಲೀಪ ಚಕ್ರವರ್ತಿ,  ದಿನೇಶ್ ಪಿ.ಕೆ,  ಪ್ರಧಾನ ಅರ್ಚಕ ಸೋಮನಾಥ ಮಯ್ಯ ಮತ್ತಿತರರು ಉಪಸ್ಥಿತರಿದ್ದರು. ಪುರೋಹಿತ ವಿಜಯಕೃಷ್ಣ ಐತಾಳ ಸರಪಾಡಿ ಅವರು ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು.

- Advertisement -
spot_img

Latest News

error: Content is protected !!