Thursday, June 25, 2026
Homeಕರಾವಳಿಬೆಳ್ತಂಗಡಿ: ಪಿಲಿಗೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ಶ್ರಮದಾನ

ಬೆಳ್ತಂಗಡಿ: ಪಿಲಿಗೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ಶ್ರಮದಾನ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಪಿಲಿಗೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದಿಂದ ಶನಿವಾರ ಶ್ರಮದಾನ‌ ನಡೆಯಿತು. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಸ್ತೆ ಬದಿ ಹಾಗೂ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ, ಹೂ ಗಿಡಗಳನ್ನು ನೆಡಲಾಯಿತು.

ಶ್ರಮದಾನ ಕಾರ್ಯದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಶಾಲೆಯ ಮುಖ್ಯಶಿಕ್ಷಕ ವೀರೇಂದ್ರ ಪಾಟೀಲ್ ನಾಯಕ್ ಎಂ., ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭುವನೇಶ್ವರ ಜಿ., ಉಪಾಧ್ಯಕ್ಷ ಲಕ್ಷ್ಮಣ್, ಸಂಘದ ಉಮೇಶ್, ಇಸುಬು, ನಾರಾಯಣ, ಯಾದವ ಜಿ., ಯೋಗೀಶ್ ನಡುಗುಡ್ಡೆ, ಹರ್ಷಿತ್ ಪಿಂಡಿವನ, ಶಾಲಾ ಶಿಕ್ಷಕರು, ಅಕ್ಷರ ದಾಸೋಹ ಸಿಬ್ಬಂದಿ ಭಾಗಿಯಾಗಿದ್ದರು

- Advertisement -

Latest News

error: Content is protected !!