Tuesday, September 17, 2024
Homeತಾಜಾ ಸುದ್ದಿಶೋಪಿಯಾನ್ ನಲ್ಲಿ ಇಬ್ಬರು ಜೆಎಂ ಉಗ್ರರ ಬಂಧನ : ಶಸ್ತ್ರಾಸ್ತ್ರ , ಮದ್ದುಗುಂಡು ವಶಕ್ಕೆ

ಶೋಪಿಯಾನ್ ನಲ್ಲಿ ಇಬ್ಬರು ಜೆಎಂ ಉಗ್ರರ ಬಂಧನ : ಶಸ್ತ್ರಾಸ್ತ್ರ , ಮದ್ದುಗುಂಡು ವಶಕ್ಕೆ

spot_img
- Advertisement -
- Advertisement -

ಶ್ರೀನಗರ: ಕಣಿವೆ ರಾಜ್ಯದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಯೋಜಿಸಿದ್ದ ಇಬ್ಬರು ಜೈಶ್-ಎ-ಮೊಹಮದ್ (ಜೆಎಂ) ಉಗ್ರರನ್ನು ಬಂಧಿಸಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

‘ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಭದ್ರತಾ ಪಡೆಗಳು, ಅವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿವೆ. ಭದ್ರತಾ ಪಡೆಗಳು ಬಂಧಿತರಿಂದ ಪಿಸ್ತೂಲ್ ಮತ್ತು ಎರಡು ಗ್ರೆನೇಡ್‍ಗಳನ್ನು ವಶಪಡಿಸಿಕೊಂಡಿವೆ ಎಂದು ತಿಳಿದು ಬಂದಿದೆ.

ತಾವು ಜೆಎಂ ಸದಸ್ಯರೆಂದು ವಿಚಾರಣೆ ವೇಳೆ ಆರೋಪಿಗಳು ಹೇಳಿಕೊಂಡಿದ್ದಾರೆ. ಸಂಘಟನೆಯಿಂದ ತಮಗೆ ಇತ್ತೀಚೆಗೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!