Thursday, July 16, 2026
Homeತಾಜಾ ಸುದ್ದಿಬೆಚ್ಚಿಬೀಳಿಸಿದ ಕಾರ್ ಬಾಂಬ್ ಸ್ಫೋಟ- ಎಂಟು ಮಂದಿ ಸೈನಿಕರ ಸಾವು!..

ಬೆಚ್ಚಿಬೀಳಿಸಿದ ಕಾರ್ ಬಾಂಬ್ ಸ್ಫೋಟ- ಎಂಟು ಮಂದಿ ಸೈನಿಕರ ಸಾವು!..

- Advertisement -
- Advertisement -

ಬಾಗ್ಧಾದ್ :ಇಲ್ಲಿನ ಪೂರ್ವ ನಂಗರ್ಹಾರ್ ಪ್ರಾಂತ್ಯದ ಶಿರ್ಜಾದ್ ಜಿಲ್ಲೆಯ ಸೇನಾ ನೆಲೆಯ ಬಳಿ ಶನಿವಾರ ಕಾರ್ ಬಾಂಬ್ ಸ್ಫೋಟ ನಡೆದಿದೆ. ಘಟನೆಯಲ್ಲಿ ಎಂಟು ಮಂದಿ ಆಫ್ಘನ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಪ್ರಾಂತೀಯ ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಉಗ್ರರು ಯೋಜನೆ ರೂಪಿಸಿ ಸ್ಫೋಟಕ ತುಂಬಿದ ಸೇನಾ ವಾಹನವನ್ನು ಸ್ಫೋಟಿಸಿ ಎಂಟು ಸೈನಿಕರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದ್ದು ನಂಗರ್ ಹಾರ್ ಪ್ರಾಂತೀಯ ರಾಜಧಾನಿ ಜಲಾಲಾಬಾದ್ ನಗರದಲ್ಲಿ ಉಗ್ರರು ಸ್ಫೋಟಿಸಲು ಯತ್ನಿಸುತ್ತಿದ್ದ ಅದೇ ಜಿಲ್ಲೆಯಿಂದ ಮತ್ತೊಂದು ಸ್ಫೋಟಕ ತುಂಬಿದ ವಾಹನವನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಸ್ಥಳದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!