Saturday, June 6, 2026
Homeಕರಾವಳಿಉಡುಪಿಶೋಭಾ ಕರಂದ್ಲಾಜೆ ಅವರಿಗೊಲಿದ ಕೇಂದ್ರ ಕೃಷಿ ಖಾತೆ

ಶೋಭಾ ಕರಂದ್ಲಾಜೆ ಅವರಿಗೊಲಿದ ಕೇಂದ್ರ ಕೃಷಿ ಖಾತೆ

- Advertisement -
- Advertisement -

ನವದೆಹಲಿ : ಜ್ಯೋತಿರಾದಿತ್ಯ ಸಿಂಧಿಯಾ, ಪಶುಪತಿ ಕುಮಾರ್ ಪರಾಸ್, ಅನುರಾಗ್ ಠಾಕೂರ್ ಸೇರಿದಂತೆ 43 ಹೊಸ ಸಚಿವರು ನಿನ್ನೆ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೇಂದ್ರ ಸಚಿವ ಸಂಪುಟಕ್ಕೆ ಬುಧವಾರ ಸೇರ್ಪಡೆಗೊಂಡ ನೂತನ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿ ಸಿದ್ದು, ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿಗಳಿಗೆ ನಿನ್ನೆ ರಾತ್ರಿ ಮೋದಿ ಖಾತೆ ಹಂಚಿಕೆ ಮಾಡಿದ್ದಾರೆ.

ಕರ್ನಾಟಕದಿಂದ ನೂತನ ಸಚಿವರಾಗಿ ಸಂಸದರಾದಂತ ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ಎ ನಾರಾಯಣಸ್ವಾಮಿ ಹಾಗೂ ಭಗವಂತ್ ಖೂಬಾ ಅವರಿಗೂ ಖಾತೆ ಹಂಚಿಕೆ ಮಾಡಲಾಗಿದೆ.

ಕರ್ನಾಟಕದ ರಾಜೀವ್ ಚಂದ್ರಶೇಖರ್ ಗೆ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಹೊಣೆ ನೀಡಲಾಗಿದೆ. ಶೋಭಾ ಕರಂದ್ಲಾಜೆಗೆ ಕೃಷಿ , ರೈತರ ಕಲ್ಯಾಣ ಇಲಾಖೆ ಖಾತೆ ಎ. ನಾರಾಯಣ ಸ್ವಾಮಿಗೆ ಸಾಮಾಜಿಕ ನ್ಯಾಯ ಮತ್ತು ಸ್ವಾವಲಂಬನ ಇಲಾಖೆ.ಭಗವಂತ ಖೂಬ ಅವರಿಗೆ ನವೀಕರಿಸಬಹುದಾದ ಇಂಧನ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ರಾಜ್ಯ ಸಚಿವರ ಹೊಣೆ ವಹಿಸಲಾಗಿದೆ.

- Advertisement -

Latest News

error: Content is protected !!