Wednesday, June 24, 2026
Homeತಾಜಾ ಸುದ್ದಿರೇಣುಕಾಸ್ವಾಮಿ ಕೊಲೆ ಪ್ರಕರಣ; ಘಟನೆ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣ; ಘಟನೆ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದೇನು?

- Advertisement -
- Advertisement -

ಬೆಂಗಳೂರು; ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈಗಾಗಲೇ ನಟಿ ರಕ್ಷಿತಾ, ನಿರ್ದೇಶಕ ಪ್ರೇಮ್ ದರ್ಶನ್ ಅವರನ್ನು ಭೇಟಿಯಾಗಿ ಮಾತನಾಡಿದ್ದಾರೆ.

ಇದೀಗ ಘಟನೆ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊದಲ ಬಾರಿಗೆ ರಿಯ್ಯಾಕ್ಟ್ ಮಾಡಿದ್ದು, ಇದರ ಬಗ್ಗೆ ಮಾತಾಡಿ ಪ್ರಯೋಜನ ಇಲ್ಲ ಘಟನೆಯಿಂದ ಎರಡು ಕುಟುಂಬಗಳಿಗೆ ನೋವಾಗಿದೆ. ದರ್ಶನ್ ಹಾಗೂ ರೇಣುಕಾ ಸ್ವಾಮಿ ಕುಟುಂಬಕ್ಕೆ ನೋವಾಗಿದೆ ಎಂದಿದ್ದಾರೆ.

ಬಹುಶಃ ಏನು ಮಾಡೋಕ್ಕೆ ಆಗಲ್ಲ. ಪ್ರಕರಣದ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಕಾನೂನಿನ ಅಡಿಯಲ್ಲಿ ಏನಾಗಬೇಕು ಅದು ಆಗೇ ಆಗುತ್ತದೆ. ಆದರೆ ಈ ಒಂದು ಘಟನೆ ನಡೆಯಬಾರದಿತ್ತು ಇದರಿಂದ ನನಗೂ ತುಂಬಾ ಬೇಸರವಾಗಿದೆ. ದರ್ಶನ್ ಕುಟುಂಬ ಆಗಿರಬಹುದು ರೇಣುಕಾಸ್ವಾಮಿ ಕುಟುಂಬ ಆಗಿರಬಹುದು ಹೀಗೆ ಆಗಬಾರದಿತ್ತು. ನೋಡೋಣ ಮುಂದೆ ಏನಾಗುತ್ತದೆ ಎಂದು ಈಗಾಗಲೇ ಪ್ರಕರಣದ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

- Advertisement -

Latest News

error: Content is protected !!