Saturday, June 1, 2024
Homeಇತರಮಲೆನಾಡು ಶಿವಮೊಗ್ಗಕ್ಕೂ ಕಾಲಿಟ್ಟ ಡೆಡ್ಲಿ ವೈರಸ್: ಇಂದು ಎಂಟು ಮಂದಿಗೆ ಸೊಂಕು ದೃಡ

ಮಲೆನಾಡು ಶಿವಮೊಗ್ಗಕ್ಕೂ ಕಾಲಿಟ್ಟ ಡೆಡ್ಲಿ ವೈರಸ್: ಇಂದು ಎಂಟು ಮಂದಿಗೆ ಸೊಂಕು ದೃಡ

spot_img
- Advertisement -
- Advertisement -

ಶಿವಮೊಗ್ಗ : ಗ್ರೀನ್‌ ಜೋನ್‌ನಲ್ಲಿದ್ದ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೂ ಡೆಡ್ಲಿ ವೈರಸ್‌ ಕೊರೋನಾ ಕಾಲಿಟ್ಟಿದ್ದು, ಎಂಟು ಮಂದಿಗೆ ಕೋವಿಡ್ -19 ಸೊಂಕು ಇರೋದು ಧೃಡಪಟ್ಟಿದೆ. ಈ ಬಗ್ಗೆ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌ ಈಶ್ವರಪ್ಪ ಶಿವಮೊಗ್ಗದ 8 ಮಂದಿಗೆ ಕೊರೊನಾವೈರಸ್‌ ಇರುವುದರ ಬಗ್ಗೆ ಧೃಡಪಡಿಸಿದ್ದಾರೆ.

ಜಿಲ್ಲೆಯ ಶಿಕಾರಿಪುರ ಮೂಲದ 8 ಮತ್ತು ತೀರ್ಥಹಳ್ಳಿಯ ಒಬ್ಬರು ತಬ್ಲಿಘಿಗಳು ಗುಜರಾತ್‍ನ ಅಹಮದಾಬಾದ್‍ನಿಂದ ಬೆಳಗಾವಿ ಗಡಿ ಮೂಲಕ ಶಿವಮೊಗ್ಗಕ್ಕೆ ವಾಪಸ್ ಬಂದಿದ್ದರು, ಇದೇ ವೇಳೆ ಅವರನ್ನು ವಮೊಗ್ಗದ ಬಾಪೂಜಿನಗರದ ಹಾಸ್ಟೆಲ್‍ವೊಂದರಲ್ಲಿ ಇವರನ್ನು ಕ್ವಾರಂಟೈನ್ ಮಾಡಿ ನಿಗವಹಿಸಲಾಗಿತ್ತು, ಈಗ ವೈದ್ಯಕೀಯ ವರದಿ ಬಂದಿದ್ದು, 8 ಮಂದಿಗೆ ಸೊಂಕು ಇರೋದು ಧೃಡಪಟ್ಟಿದೆ.

ಕರ್ನಾಟಕದಲ್ಲಿ ಇಂದು 53 ಸೋಂಕಿತರ ಪತ್ತೆಯಾಗಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 847ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.

- Advertisement -
spot_img

Latest News

error: Content is protected !!