Saturday, May 18, 2024
Homeಕರಾವಳಿಉಡುಪಿಕೊರೋನಾ ಸೋಂಕಿಗೆ ಚಲನಚಿತ್ರ ನಟ ಶೇಖರ್ ಭಂಡಾರಿ ಕಾರ್ಕಳ ಬಲಿ

ಕೊರೋನಾ ಸೋಂಕಿಗೆ ಚಲನಚಿತ್ರ ನಟ ಶೇಖರ್ ಭಂಡಾರಿ ಕಾರ್ಕಳ ಬಲಿ

spot_img
- Advertisement -
- Advertisement -

ಮಂಗಳೂರು: ಚಲನಚಿತ್ರ ನಟ, ಚುಟುಕು ಸಾಹಿತಿ, ಹಾಸ್ಯ ಕವಿ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶೇಖರ್ ಭಂಡಾರಿ ಕಾರ್ಕಳ (72) ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಕಾರ್ಕಳ ಶೇಖರ್ ಭಂಡಾರಿ ಎಂಬ ದೈತ್ಯಪ್ರತಿಭೆ
ಶೇಖರ ಭಂಡಾರಿ ಅವರು ಕಾರ್ಕಳದ ಬೆಟ್ಟದ ಮನೆಯ ಬಾಬು ಭಂಡಾರಿ ಮತ್ತು ಅಭಯ ಭಂಡಾರಿ ಅವರ ಪುತ್ರರು. ಶಾಲಾ ಕಾಲೇಜು ದಿನಗಳಲ್ಲಿಯೇ ರಂಗಭೂಮಿ ಅವರನ್ನು ಕೈಬೀಸಿ ಕರೆಯಿತು. ಕಾರ್ಕಳದಲ್ಲಿಯೇವ ವಿದ್ಯಾಭ್ಯಾಸ ಮುಗಿಸಿದ ಅವರು, ವಿಜಯಾ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬೆಂಗಳೂರಿನ ಯಶವಂಪತಪುರ ಶಾಖೆಯಲ್ಲಿ ಕಾರ್ಯನಿರ್ವಹಿಸಿ ಸದ್ಯ ನಿವೃತ್ತಿ ಪಡೆದಿದ್ದಾರೆ.

ನಾಟಕಗಳಲ್ಲಿ ಅಭಿನಯಿಸುತ್ತಾ ಚಿತ್ರರಂಗ ಪ್ರವೇಶಿಸಿ ಖಳನಟ, ಖಳನಾಯಕ,ಹಾಸ್ಯ ಪಾತ್ರ,ಪೋಷಕ ಪಾತ್ರ ಹೀಗೆ ಪಾಲಿಗೆ ಬಂದ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡುತ್ತಾ ಗಮನ ಸೆಳೆದು,ಚುಟುಕು ಸಾಹಿತ್ಯ ಕೃಷಿಗಿಳಿದು ಅಲ್ಲಿಯೂ ತಮ್ಮ ಛಾಪು ಒತ್ತಿ “ಚುಟುಕು ಸಾಹಿತಿ” “ಪ್ರಾಸ ಪ್ರವೀಣ” ನೆಂದು ಹೆಸರು ಗಳಿಸಿ,ಸಮಾಜ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಪ್ಪತ್ತರ ಹರೆಯದಲ್ಲೂ ಲವಲವಿಕೆಯಿಂದ ಇರುವ ಇವರಿಗೆ 2018 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿತ್ತು.

ಚಲನಚಿತ್ರಗಳಲ್ಲೂ ನಟನೆ
ಶೇಖರ ಭಂಡಾರಿ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಜೆಗಳು ಪ್ರಭುಗಳು, ಇಂದ್ರ ಧನುಷ್, ಸ್ವಲ್ಪ ಅಜೆಸ್ಟ್ ಮಾಡ್ಕೋಳಿ, ಏಕಾಂಗಿ, ಓ ನನ್ನ ನಲ್ಲೆ, ಲವ್, ಧರ್ಮಯೋಧರು, ನನ್ನ ತಂಗಿ, ಕೋಟಿ ಚೆನ್ನಯ್ಯ, ತಮಾಶೆಗಾಗಿ, ಐದೊಂದ್ಲ ಐದು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಿರುತೆರೆಯಲ್ಲೂ ಭಂಡಾರಿ ಪ್ರತಿಭಾ ಪ್ರದರ್ಶನ
ಕಿರುತೆರೆಯ ಜೋಗುಳ, ಗುರುರಾಘವೇಂದ್ರ ವೈಭವ, ರಂಗೋಲಿ ಮುಂತಾದ ಧಾರವಾಹಿಗಳಲ್ಲಿ ಶೇಖರ ಭಂಡಾರಿ ಅವರು ಅಭಿನಯಿಸಿದ್ದಾರೆ

ಭಂಡಾರಿ ಅವರ ಪತ್ನಿ ವಾರಿಜಾ ಶೇಖರ್, ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಹಿರಿಯ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೃತ ಶೇಖರ್ ಭಂಡಾರಿಯವರು ಪತ್ನಿ ವಾರಿಜಾ ಶೇಖರ್ ಭಂಡಾರಿ, ಮಕ್ಕಳಾದ ಪ್ರೀತಿ ಪದ್ಮನಾಭ್ ಮತ್ತು ಸ್ವಾತಿ ಶರತ್, ಕುಟುಂಬ ವರ್ಗದವರು, ಆತ್ಮೀಯರು ಮತ್ತು ಅನೇಕ ಹಿತೈಷಿಗಳನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!