Friday, June 5, 2026
Homeಕರಾವಳಿಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರ ಶೆಡ್ ಕುಸಿದು 10 ಮಂದಿಗೆ ಗಾಯ

ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರ ಶೆಡ್ ಕುಸಿದು 10 ಮಂದಿಗೆ ಗಾಯ

- Advertisement -
- Advertisement -

ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ನ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರ ಶೆಡ್ ಕುಸಿದು 10 ಮಂದಿಗೆ ಗಾಯಗಳಾಗಿವೆ . ನಿನ್ನೆ ತಡರಾತ್ರಿ 11.30 ರ ಸುಮಾರಿಗೆ ಘಟನೆ ನಡೆದಿದೆ.


ಕೂಲಿ ಕಾರ್ಮಿಕರು ಶೆಡ್‌ ನಲ್ಲಿ ಮಲಗಿದ್ದಾಗ ಏಕಾಏಕಿ ಶೆಡ್‌ ನ ತಳ ಭಾಗ ಕುಸಿದು ಬಿದ್ದ ಕಾರಣ ಈ ಅನಾಹುತ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ.  ದುರ್ಘಟನೆಗೆ ಕಟ್ಟಡ ಕಾಮಾಗಾರಿ ಮಾಡುತ್ತಿರುವವರ ಬೇಜಾಬ್ದಾರಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಹೊಸ ಸೆಂಟ್ರಲ್ ಮಾರ್ಕೆಟ್ ಕಟ್ಟಡ ನಿರ್ಮಾಣಕ್ಕಾಗಿ ಕಾರ್ಮಿಕರು ಮಲಗಿದ್ದ ಶೆಡ್‌ ಗಳ ಅಡಿ ಭಾಗದಲ್ಲಿ ಸುಮಾರು 30 ಅಡಿಗಳಷ್ಟು ಆಳ ಮಣ್ಣನ್ನು ತೆಗೆಯಲಾಗಿದ್ದು ಈ ಸಂದರ್ಭ ಮೇಲ್ಭಾಗದಲ್ಲಿದ್ದ ಶೆಡ್ ಗಳ ಅಡಿ ಭಾಗ ಏಕಾಏಕಿ ಕುಸಿದು ಬಿದ್ದಿದೆ ಎನ್ನಲಾಗಿದೆ.

- Advertisement -

Latest News

error: Content is protected !!