Thursday, July 16, 2026
Homeಕರಾವಳಿಮಂಗಳೂರು; ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಗೆ ಜೀವ ಬೆದರಿಕೆ

ಮಂಗಳೂರು; ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಗೆ ಜೀವ ಬೆದರಿಕೆ

- Advertisement -
- Advertisement -

ಮಂಗಳೂರು; ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜೈ ಶ್ರೀರಾಮ್ ಎಂಬ ಹೆಸರಿನ ವಾಟ್ಸಾಪ್ ಗ್ರೂಪ್ ನಲ್ಲಿ ಹನಿ ಹಿಂದೂಸ್ತಾನಿ ಮುಂಬೈ ಎಂಬ ಹೆಸರಿನಲ್ಲಿ “ಮಿಥುನ್ ರೈಯವರಿಗೆ ಗುಂಡಿನೂಟ ಮಾಡಿಸುತ್ತೇನೆ” ಎಂಬ ವಿಚಾರವನ್ನೊಳಗೊಂಡ ಕೊಲೆ ಬೆದರಿಕೆ ಪೋಸ್ಟ್ ಒಂದನ್ನು ಹಾಕಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಜೀವ ಬೆದರಿಕೆಯ ಪೋಸ್ಟ್ ಗಳನ್ನು ಹಾಕುತ್ತಿರುವ ವ್ಯಕ್ತಿಗಳು ಹಾಗೂ ಹನಿ ಹಿಂದೂಸ್ತಾನಿ ಮುಂಬೈ ಇವರನ್ನು ಪತ್ತೆಹಚ್ಚಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕೂಡಲೇ ಮಿಥುನ್ ರೈಯವರಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್‌ ಕೋಟ್ಯಾನ್ ನೀಡಿರುವ ದೂರಿನಲ್ಲಿ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!