ಬೆಳ್ತಂಗಡಿ: ಮೇಲಂತಬೆಟ್ಟು ಬಳಿ ಕಲ್ಲಿನಕೋರೆ ದಾಳಿ ವೇಳೆ ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ಸೇರಿಸಿ ಕೇಸ್ ದಾಖಲಿಸಿ ಜೈಲಿಗಟ್ಟಿದವರಿಗೆ ತಾಯಿ ಮಹಮ್ಮಾಯಿ ಶಿಕ್ಷೆ ನೀಡಲಿ ಎಂದು ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರು ಬೆಳ್ತಂಗಡಿ ಮಹಮ್ಮಾಯಿ ದೇವಸ್ಥಾನದಲ್ಲಿ ಪ್ರಾರ್ಥಿಸಿದರು.
ಕಳೆದ ಎರಡು ತಿಂಗಳ ಹಿಂದೆ ಮೇಲಂತಬೆಟ್ಟು ಸಮೀಪ ತಹಶೀಲ್ದಾರ್ ನೇತೃತ್ವದಲ್ಲಿ ಕಲ್ಲಿನ ಕೋರೆಗೆ ದಾಳಿ ನಡೆಸಿ ನಂತರ ಉದ್ದೇಶಪೂರ್ವಕವಾಗಿ ನನ್ಮ ತೇಜೋವಧೆ ಮಾಡುವುದಕ್ಕಾಗಿ ರಕ್ಷಿತ್ ಶಿವರಾಂ ಒತ್ತಡಕ್ಕೆ ಮಣಿದು ಪೊಲೀಸರು ನನ್ನ ಹೆಸರನ್ನು ಸೇರಿಸಿ ರಾತ್ರೋರಾತ್ರಿ ಬಂಧಿಸಿದ್ದಾರೆ. ಅದಲ್ಲದೇ ಸುಮಾರು 27 ದಿನ ಜೈಲಿನಲ್ಲಿ ಇರುವಂತೆ ಮಾಡಿದ್ದಾರೆ. ಈ ಕಲ್ಲಿನ ಕೋರೆಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡುತಿದ್ದೇನೆ. ನನ್ನನ್ನು ಈ ಪ್ರಕರಣದಲ್ಲಿ ಸುಳ್ಳು ಕೇಸ್ ದಾಖಲಿಸಿ ಜೈಲಿಗಟ್ಟುವಂತೆ ಪೊಲೀಸರಿಗೆ ಒತ್ತಡ ಹಾಕಿದ ರಕ್ಷಿತ್ ಶಿವರಾಂ ಹಾಗೂ ಇದರ ಹಿಂದೆ ಷಡ್ಯಂತ್ರ ಹೂಡಿದ ಎಲ್ಲರಿಗೂ ತಾಯಿ ಮಹಮ್ಮಾಯಿ ಶಿಕ್ಷೆ ನೀಡಲಿ. ಎಂದು ಪ್ರಾರ್ಥಿಸಿದರು. ಈ ವೇಳೆ ಶಾಸಕ ಹರೀಶ್ ಪೂಂಜ ಯುವ ಮೋರ್ಚಾ ,ಉಪಾಧ್ಯಕ್ಷ ಗಣೇಶ್ ಲಾಯಿಲ ಸಿ.ಎ.ಬ್ಯಾಂಕ್ ನಿರ್ದೇಶಕ ರಮೇಶ್ ನಲಿಕೆ,ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ವಿಠಲ ಆಚಾರ್ಯ ಗುರುವಾಯನಕೆರೆ,ಯುವ ಮೋರ್ಚಾ ಕಾರ್ಯದರ್ಶಿ ಹರೀಶ್ ಗೌಡ ಸಂಬೋಳ್ಯ ಕಾರ್ಯಕಾರಿಣಿ ಸದಸ್ಯ ಜಗದೀಶ್ ಕನ್ನಾಜೆ, ನ.ಪಂ ಸದಸ್ಯ ಶರತ್ ಕುಮಾರ್, ಪ್ರದೀಪ್ ಶೆಟ್ಟಿ ಗುರುವಾಯನಕೆರೆ, ಗುರು ಲಾಯಿಲ.ಹಾಗೂ ಇತರರು ಉಪಸ್ಥಿತರಿದ್ದರು.