Sunday, May 5, 2024
Homeತಾಜಾ ಸುದ್ದಿಇವರೇ ನೋಡಿ ರಾಜ್ಯದ ಮೊದಲ ತೃತೀಯ ಲಿಂಗಿ ಲಾಯರ್

ಇವರೇ ನೋಡಿ ರಾಜ್ಯದ ಮೊದಲ ತೃತೀಯ ಲಿಂಗಿ ಲಾಯರ್

spot_img
- Advertisement -
- Advertisement -

ಮೈಸೂರು : ತೃತೀಯ ಲಿಂಗಿಯಾಗಿ ಎಲ್ ಎಲ್ ಬಿ ಪದವಿಯನ್ನು ಮೊದಲ ಬಾರಿಗೆ ಮುಗಿಸುವ ಮೂಲಕ, ರಾಜ್ಯದಲ್ಲೇ ಮೊದಲ ತೃತೀಯ ಲಿಂಗಿ ಲಾಯರ್ ಎಂಬ ಹೆಗ್ಗಳಿಕೆಗೆ ಮೈಸೂರಿನ ಸಿ.ಶಶಿ ಪಾತ್ರವಾಗಿದ್ದಾರೆ.

ಮೈಸೂರಿನ ಜಯನಗರದ ನಿವಾಸಿಯಾಗಿರುವಂತ ಸಿ.ಶಶಿ, ತೃತೀಯ ಲಿಂಗಿಯಾಗಿ, ಎಲ್ ಎಲ್ ಬಿ ಮುಗಿಸಿ, ರಾಜ್ಯದಲ್ಲಿ ಮೊದಲ ತೃತೀಯ ಲಿಂಗಿ ಲಾಯರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವಂತ ಅವರು, 10ನೇ ತರಗತಿ ಓದುತ್ತಿರುವಾಗಲೇ ದೇಹದಲ್ಲಿ ಬದಲಾವಣೆಯಾಗಿ ತೃತೀಯ ಲಿಂಗಿಯಾದೆ. ಆ ಬಳಿಕ ತುಂಬಾ ನೋವು, ಅಪಮಾನ, ನಿಂದನೆ ಕಿರುಕುಳ ಅನುಭವಿಸಿದೆ. ಈಗ ಎಲ್ ಎಲ್ ಬಿ ಮುಗಿಸಿ ವಕೀಲೆಯಾಗಿದ್ದೇನೆ. ನನ್ನ ಕಷ್ಟ ಯಾರಿಗೂ ಬರಬಾರದು ಎಂದು ಭಾವುಕರಾಗಿ ನುಡಿದಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿದಂತ ಅವರು ನನಗೆ ವಿದ್ಯಾವರ್ಧಕ ಕಾಲೇಜಿನಲ್ಲಿ ಎಲ್ ಎಲ್ ಬಿ ಮುಗಿಸಲು ಸಹಾಯ ಮಾಡಿದ ಸ್ನೇಹಿತರಿಗೆ, ಕಾಲೇಜಿನ ಉಪನ್ಯಾಸಕರಿಗೆ ಧನ್ಯವಾದಗಳು. ಆರ್ಥಿಕವಾಗಿ ಕಷ್ಟದಲ್ಲಿದ್ದಂತ ನನಗೆ ಸ್ನೇಹಿತರು ಸಹಾಯ ಮಾಡಿ ಪದವಿ ಮುಗಿಯಲು ಅನುವಾದರು. ನಾನು ಅನುಭವಿಸಿದ ಕಷ್ಟಗಳು ಬೇರಾವುದೇ ತೃತೀಯ ಲಿಂಗಿಗಳು ಅನುಭವಿಸಬಾರದು. ಅವರ ಕಷ್ಟಗಳಿಗೆ ನಾನು ಧ್ವನಿಯಾಗುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!