Sunday, May 5, 2024
Homeತಾಜಾ ಸುದ್ದಿಫೇಸ್ ಬುಕ್ ಗೆಳೆಯನನ್ನು ನಂಬಿ ಎಲ್ಲವನ್ನೂ ನೀಡಿದ ಆಂಟಿ: ಮೋಸ ಹೋದ ಬಳಿಕ ಪೊಲೀಸ್ ಠಾಣೆ...

ಫೇಸ್ ಬುಕ್ ಗೆಳೆಯನನ್ನು ನಂಬಿ ಎಲ್ಲವನ್ನೂ ನೀಡಿದ ಆಂಟಿ: ಮೋಸ ಹೋದ ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ

spot_img
- Advertisement -
- Advertisement -

ಚಿಕ್ಕಬಳ್ಳಾಪುರ: ಫೇಸ್​ಬುಕ್​ನಲ್ಲಿ ಪರಿಚಯವಾದ ಯುವಕನಿಂದ ಮಹಿಳೆ ವಂಚನೆಗೆ ಒಳಗಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಫೇಸ್​ಬುಕ್ ಮೂಲಕ ಪರಿಚಯವಾದ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಇಡ್ಲಿಪಾಳ್ಯ ನಿವಾಸಿ ಸತೀಶ್, ಮಂಡ್ಯ ಮೂಲದ ವಿವಾಹಿತೆಗೆ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿ ಮಹಿಳೆ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

ಫೇಸ್​ಬುಕ್​ನಲ್ಲಿ ಪರಿಚಯವಾದ ಸತೀಶ್ ಪ್ರೀತಿ, ಪ್ರೇಮ, ಕಾಮ ಎಂದು ವಿವಾಹಿತ ಮಹಿಳೆಯ ತಲೆ ಕೆಡಿಸಿದ್ದಾನೆ. ಮಹಿಳೆಯ ಅತ್ಯಾಚಾರದ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ನೊಂದ ಮಹಿಳೆ ಆರೋಪಿಸಿದ್ದಾರೆ.

ಮಹಿಳೆಯ ಸೈಟ್ ಹಾಗೂ ಮನೆ ಮಾರಿಸಿ 15 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಸದ್ಯ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಸತೀಶ್ ಚಿಂತಾಮಣಿಯಲ್ಲಿ ಫೈನಾನ್ಸಿಯರ್ ಆಗಿದ್ದಾನೆ. ಹಾಗೂ ಮಹಿಳೆ ಬ್ಯೂಟಿ ಪಾರ್ಲರ್​ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!