Friday, June 26, 2026
Homeಕರಾವಳಿಬೆಳ್ತಂಗಡಿ: ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಕುರಿಗೊಬ್ಬರ ಸಾಗಾಟದ ಲಾರಿ

ಬೆಳ್ತಂಗಡಿ: ನಿಯಂತ್ರಣ ತಪ್ಪಿ ಕಮರಿಗೆ ಉರುಳಿದ ಕುರಿಗೊಬ್ಬರ ಸಾಗಾಟದ ಲಾರಿ

- Advertisement -
- Advertisement -

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಕುರಿಗೊಬ್ಬರ ತುಂಬಿದ ಲಾರಿಯೊಂದು ರಸ್ತೆ ಬದಿಯ ಕಮರಿಗೆ ಬಿದ್ದ ಘಟನೆ ನಾವೂರು ಗ್ರಾಮದ ಕೋಡಿ ಎಂಬಲ್ಲಿ ಇಂದು ಬೆಳಿಗ್ಗೆ ಸುಮಾರು 11 ಗಂಟೆಗೆ‌ ನಡೆದಿದೆ. ಅದೃಷ್ಟವಶಾತ್ ಚಾಲಕ ಹಾಗೂ ನಿರ್ವಾಹಕ ಹಾಗೂ ಸಹಾಯಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿತ್ರದುರ್ಗದಿಂದ ನಾವೂರಿಗೆ 550 ಬ್ಯಾಗ್ ಕುರಿಗೊಬ್ಬರ ತುಂಬಿದ ಲಾರಿ ಬಂದಿದೆ. ಕಿರ್ನಡ್ಕ ಕಾಲನಿಯಿಂದ ಬರಮೇಲು ಹಡೀಲು ಕಾಂಕ್ರೀಟ್ ರಸ್ತೆ ಮಧ್ಯ 100 ಮೀ. ಮಣ್ಣಿನ ರಸ್ತೆಯು ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದರಿಂದ ಮೃದುವಾಗಿತ್ತು. ಲಾರಿ ಚಾಲಕ ಇದನ್ನು ಗಮನಿಸದೆ, ರಸ್ತೆ ಅಂಚಿಗೆ ಸರಿದಿದ್ದರಿಂದ ಲಾರಿ ಮಗುಚಿಬಿದ್ದಿದೆ.

- Advertisement -

Latest News

error: Content is protected !!