Thursday, June 4, 2026
Homeಕರಾವಳಿನಟ ಶರತ್ ಬಾಬು ಆರೋಗ್ಯ ಸ್ಥಿರವಾಗಿದೆ, ವದಂತಿಗಳಿಗೆ ಕಿವಿಗೊಡಬೇಡಿ; ಸಹೋದರಿಯಿಂದ ಮನವಿ

ನಟ ಶರತ್ ಬಾಬು ಆರೋಗ್ಯ ಸ್ಥಿರವಾಗಿದೆ, ವದಂತಿಗಳಿಗೆ ಕಿವಿಗೊಡಬೇಡಿ; ಸಹೋದರಿಯಿಂದ ಮನವಿ

- Advertisement -
- Advertisement -

ಹೈದ್ರಾಬಾದ್ : ಶರತ್ ಬಾಬು ಇನ್ನಿಲ್ಲ ಎಂಬ ಸುದ್ದಿ ಸುಳ್ಳು ಎಂದು ಅವರ ಸಹೋದರಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ವದಂತಿಗಳನ್ನ ನಂಬದಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಶರತ್ ಬಾಬು ಆರೋಗ್ಯದ ಕುರಿತು ಹೇಳಿಕೆ ನೀಡಿರುವ ಕುಟುಂಬ, ಹಿರಿಯ ನಟನ ಆರೋಗ್ಯ ಸ್ಥಿರವಾಗಿದ್ದು, ಶೀಘ್ರದಲ್ಲೇ ಚೇತರಿಸಿಕೊಂಡು ಮನೆಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ.

ಶರತ್ ಬಾಬು ಅವ್ರ ಆರೋಗ್ಯ ಕೊಂಚ ಕೊಂಚ ಸುಧಾರಿಸುತ್ತಿದ್ದು, ಸಾಮಾನ್ಯ ಕೊಠಡಿಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದರು. ಶರತ್ ಬಾಬು ಅವರ ಆರೋಗ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ವದಂತಿಗಳನ್ನ ನಂಬಬೇಡಿ ಎಂದು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!