Friday, May 3, 2024
Homeಕರಾವಳಿಶಿರಾಡಿ ಘಾಟ್ ನಲ್ಲಿ ಸಾರಿಗೆ ಬಸ್, ಲಘು ವಾಹನ ಸಂಚಾರಕ್ಕೆ ಅನುಮತಿ: ಹಾಸನ ಜಿಲ್ಲಾಧಿಕಾರಿ ಆರ್....

ಶಿರಾಡಿ ಘಾಟ್ ನಲ್ಲಿ ಸಾರಿಗೆ ಬಸ್, ಲಘು ವಾಹನ ಸಂಚಾರಕ್ಕೆ ಅನುಮತಿ: ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ

spot_img
- Advertisement -
- Advertisement -

ಹಾಸನ: ರಸ್ತೆ ಕುಸಿತದಿಂದಾಗಿ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ನಿಷೇಧವನ್ನು ಹೇರಲಾಗಿತ್ತು. ಇದೀಗ ಸಾರಿಗೆ ಬಸ್ ಗಳು ಸೇರಿದಂತೆ ಲಘು ವಾಹನಗಳ ಸಂಚಾರಕ್ಕೆಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಅನುಮತಿ ನೀಡಿದ್ದಾರೆ.

ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಲಘುವಾಹನಗಳು ಹಾಸನ ಸಕಲೇಶಪುರ ಮೂಲಕ ಶಿರಾಡಿ ಘಾಟ್ ನಲ್ಲಿ ಸಂಚರಿಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ.

ಬುಲೆಟ್ ಟ್ಯಾಂಕರ್ಸ್, ಕಂಟೇನರ್ ಹಾಗು ಬೃಹತ್ ವಾಹನಗಳಿಗೆ ಸಂಚಾರ ನಿಷೇಧ ಮುಂದುವರೆಯಲಿದೆ. ಭಾರಿ ಮಳೆಯಿಂದ ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿ75 ರಲ್ಲಿ ರಸ್ತೆ ಕುಸಿತವಾಗಿತ್ತು. ಈ ಕಾರಣದಿಂದ ಕಳೆದ ಒಂದು ತಿಂಗಳಿನಿಂದ ಶಿರಾಡಿ ಘಾಟ್​ನಲ್ಲಿ ವಾಹನ ಸಂಚಾರಕ್ಕೆ ನಿಷೇಧ ವಿಧಿಸಲಾಗಿತ್ತು.

ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್ ಬಳಿ ರಸ್ತೆಯ ಒಂದು ಕಡೆ ಕುಸಿದುಹೋಗಿರುವುದರಿಂದ ಶಿರಾಡಿ ಘಾಟ್​ನಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಬೆಂಗಳೂರು, ಹಾಸನ ಮಾರ್ಗದಿಂದ ಮಂಗಳೂರು ಅಥವಾ ದಕ್ಷಿಣ ಕನ್ನಡಕ್ಕೆ ತೆರಳುವವರು ಶಿರಾಡಿ ಘಾಟ್ ಬದಲಾಗಿ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್​ನಲ್ಲಿ ತೆರಳಲು ಸೂಚಿಸಲಾಗಿತ್ತು. ಬೆಂಗಳೂರಿನಿಂದ ಮೂಡಿಗೆರೆ- ಕೊಟ್ಟಿಗೆಹಾರ ಮಾರ್ಗದ ಮೂಲಕ ಚಾರ್ಮಾಡಿ ಘಾಟ್​ನಲ್ಲಿ ಮಂಗಳೂರಿಗೆ ತೆರಳಲು ಸೂಚಿಸಲಾಗಿತ್ತು.

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿ, ಮಂಗಳೂರು ಮುಂತಾದ ಕಡೆಗಳಿಗೆ ತೆರಳುವವರು ಶಿರಾಡಿ ಘಾಟ್ ಬದಲಾಗಿ ಚಾರ್ಮಾಡಿ ಘಾಟ್ ಅಥವಾ ಮಡಿಕೇರಿ ಮಾರ್ಗದ ಸಂಪಾಜೆ ಘಾಟ್ ಮೂಲಕ ಸಂಚರಿಸಬಹುದಿತ್ತು. ಶಿರಾಡಿ ಘಾಟಿಯ ನಾಲ್ಕು ಕಡೆಗಳಲ್ಲಿ ಭೂಕುಸಿತ ಆಗಿರುವುದರಿಂದ ಇನ್ನೂ ಕೆಲವು ದಿನಗೂ ಆಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.

ಚಿಕ್ಕಮಗಳೂರಿನಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಪ್ರತಿವರ್ಷ ಮಳೆಗಾಲದಲ್ಲಿ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತದೆ. ಈ ಬಾರಿ ಚಾರ್ಮಾಡಿ ಘಾಟ್​ನಲ್ಲಿ ರಸ್ತೆಗಳನ್ನು ರಿಪೇರಿ ಮಾಡಲಾಗಿದ್ದು, ವಾಹನ ಸಂಚಾರಕ್ಕೇನೂ ತೊಂದರೆಯಿಲ್ಲ. ಆದರೆ, ಮಳೆಯಿಂದ ಎಲ್ಲಾದರೂ ಗುಡ್ಡ ಕುಸಿದರೆ ಈ ಮಾರ್ಗವೂ ಬಂದ್ ಆಗುವ ಭೀತಿ ಪ್ರಯಾಣಿಕರದ್ದು. ಹಾಗೇನಾದರೂ ಬೆಂಗಳೂರಿನಿಂದ ಕರಾವಳಿಗೆ ಪ್ರಯಾಣ ಮಾಡುವವರು ಮಡಿಕೇರಿ ಘಾಟಿ ಮತ್ತು ಕುದುರೆಮುಖ ಘಾಟಿಯನ್ನು ಮಾತ್ರ ಅವಲಂಬಿಸಬೇಕಾಗುತ್ತದೆ.

- Advertisement -
spot_img

Latest News

error: Content is protected !!