Thursday, June 4, 2026
Homeಕರಾವಳಿಅನಾರೋಗ್ಯದಿಂದ ನರಳುತ್ತಿದ್ದ ಬೀದಿನಾಯಿಯನ್ನು ಉಪಚರಿಸಿ ಮಾನವೀಯತೆ ಮೆರೆದ ಜಯಕೀರ್ತಿ ಜೈನ್

ಅನಾರೋಗ್ಯದಿಂದ ನರಳುತ್ತಿದ್ದ ಬೀದಿನಾಯಿಯನ್ನು ಉಪಚರಿಸಿ ಮಾನವೀಯತೆ ಮೆರೆದ ಜಯಕೀರ್ತಿ ಜೈನ್

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳದ  ನೇತ್ರಾವತಿ ಸಮೀಪ ಅನಾರೋಗ್ಯದಿಂದ ನರಳುತ್ತಿದ್ದ ಬೀದಿ ನಾಯಿಯ ಬಗ್ಗೆ ಮಾಹಿತಿ ಪಡೆದ ಧರ್ಮಸ್ಥಳ  ಪಶುಸಂಗೋಪನಾ ಅಧಿಕಾರಿಯಾದ ಜಯಕೀರ್ತಿ ಜೈನ್ ತಮ್ಮ ಸಿಬ್ಬಂದಿ ಜೊತೆ ಸ್ಥಳಕ್ಕೆ ಧಾವಿಸಿ ಉಪಚರಿಸಿ ನಂತರ ಓಮಿನಿ ವಾಹನದ ಮೂಲಕ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಜಯಕೀರ್ತಿ ಜೈನ್ ಅವರ ಮಾನವಿಯತೆ ಬಗ್ಗೆ ಸ್ಥಳೀಯರು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಮಂಗಳೂರು ಎನಿಮಲ್ ಕೇರ್ ಸೆಂಟರ್ ಗೆ ಹೆಚ್ಚಿನ ಚಿಕಿತ್ಸೆ ಮಾಡಲು ಕಳುಹಿಸಿಕೊಡಲಾಗಿದೆ. ಒಂದು ವಾರದ ಚಿಕಿತ್ಸೆ ಬಳಿಕ ಮತ್ತೆ ನೇತ್ರಾವತಿಯಲ್ಲಿ ಇದ್ದ ಸ್ಥಳಕ್ಕೆ ಬಿಡಲಾಗುತ್ತದೆ ಎಂದು ಜಯಕೀರ್ತಿ ಜೈನ್ ಮಹಾ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ‌.

- Advertisement -

Latest News

error: Content is protected !!