Friday, June 5, 2026
HomeUncategorizedಕರಾವಳಿಗರಿಗೆ ಶಾಕ್ ನೀಡಿದ ಮಲ್ಲಿಗೆ ದರ: ಅಟ್ಟೆಗೆ 2100 ರಿಂದ 2500 ರೂಪಾಯಿ ತನಕ ಮಾರಾಟ

ಕರಾವಳಿಗರಿಗೆ ಶಾಕ್ ನೀಡಿದ ಮಲ್ಲಿಗೆ ದರ: ಅಟ್ಟೆಗೆ 2100 ರಿಂದ 2500 ರೂಪಾಯಿ ತನಕ ಮಾರಾಟ

- Advertisement -
- Advertisement -

ಮಂಗಳೂರು: ಸಾಲು ಸಾಲು ಹಬ್ಬಗಳ ಸಂಭ್ರಮದಲ್ಲಿರುವ ಕರಾವಳಿಗರಿಗೆ ಮಲ್ಲಿಗೆ ದರ ಶಾಕ್ ನೀಡಿದೆ.  ಮಲ್ಲಿಗೆಯ ದರ ಎರಡು ಸಾವಿರ ರೂಪಾಯಿ ದಾಟಿದೆ.

ಶಂಕರಪುರ ಮಲ್ಲಿಗೆಯ ದರ ಅಟ್ಟೆಗೆ 2100 ರೂಪಾಯಿ ನಿಗದಿಯಾಗಿದ್ದು, 2500 ರೂಪಾಯಿ ತನಕ ಮಾರಾಟವಾಗುತ್ತಿದೆ. ಶಂಕರಪುರ ಕಟ್ಟೆಯಲ್ಲಿ ಮಾರಾಟಗೊಳ್ಳುವ ಮಲ್ಲಿಗೆ ದರ ಇದಾಗಿದ್ದು‌ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಮಲ್ಲಿಗೆ ದರಗಳು ಬದಲಾವಣೆಗೊಳ್ಳುತ್ತಿರುತ್ತದೆ.

ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಮಲ್ಲಿಗೆಯ ದರ ಕಡಿಮೆಯಾಗಿರುತ್ತದೆ.ನಾಳೆ ವರಮಹಾಲಕ್ಷ್ಮಿ ಪೂಜೆ ನಡೆಯಲಿದ್ದು, ಇದೂ ಕೂಡ ಬೆಲೆ ಏರಿಕೆಗೆ ಒಂದು ಕಾರಣವಾದರೆ,ಭಾರೀ ಮಳೆಯಿಂದಾಗಿ ಇಳುವರಿ ಕಡಿಮೆಯಾಗಿದ್ದು ಇದರಿಂದಾಗಿ ಮಲ್ಲಿಗೆಯ ದರ ಹೆಚ್ಚಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!