Sunday, June 29, 2025
Homeತಾಜಾ ಸುದ್ದಿಹಾಟ್ ನಟಿ ಶಕೀಲಾ ಜೀವನಾಧಾರಿತ ಚಿತ್ರದ ಟೀಸರ್ ಬಿಡುಗಡೆ

ಹಾಟ್ ನಟಿ ಶಕೀಲಾ ಜೀವನಾಧಾರಿತ ಚಿತ್ರದ ಟೀಸರ್ ಬಿಡುಗಡೆ

spot_img
- Advertisement -
- Advertisement -

ಕೇರಳ: 90ರ ದಶಕದಲ್ಲಿ ಸ್ಟಾರ್ ನಟರನ್ನು ಬದಿಗಿರಿಸಿ ಮಾಲಿವುಡ್ ಚಿತ್ರರಂಗವನ್ನು ಆಳಿದ ನಟಿ ಶಕೀಲಾ ಅವರ ಜೀವನಾಧಾರಿತ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಮಲೆಯಾಳಂ ಚಿತ್ರರಂಗದಲ್ಲಿ ಮೋಹನ್ ಲಾಲ್, ಮುಮ್ಮಟ್ಟಿಯಂತಹ ದಿಗ್ಗಜ ನಟರ ಚಿತ್ರಗಳಿಗೆ ಸೆಡ್ಡುಹೊಡೆದಿದ್ದ ನಟಿ ಶಕೀಲಾ, ಚಿತ್ರರಂಗದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದಳು. ಶಕೀಲಾ ಚಿತ್ರ ಬಿಡುಗಡೆಯಾಗಲಿದೆ ಎಂದರೆ ನಷ್ಟದ ಭೀತಿಯಿಂದ ಹಲವು ಸಿನೆಮಾ ನಿರ್ಮಾಪಕರು ತಮ್ಮ ಚಿತ್ರಗಳ ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಿದ್ದ ಕಾಲವೊಂದಿತ್ತು.

ತನ್ನ ದಢೂತಿ ದೇಹದಿಂದ ಪಡ್ಡೆ ಹುಡುಗರಿಂದ ಹಿಡಿದು 60 ವರ್ಷಗಳ ವೃದ್ಧರವರೆಗಿನವರಿಗೆ ಕಾಮದೇವತೆಯಾಗಿದ್ದ ಶಕೀಲಾ , ಇದೀಗ ಶಕೀಲಾ ಅವರ ಜೀವನಾಧಾರಿತ ಟೀಸರ್ ಬಿಡುಗಡೆಯಾಗಿದೆ. ಶಕೀಲಾ ಸಿನೆಮಾ ಯಾವ ರೀತಿ ಜಾದೂ ಮಾಡುತ್ತದೆಯೋ ಕಾದು ನೋಡಬೇಕಾಗಿದೆ.

ನಟಿ ಸರಾಯು ಮೋಹನ್ ಅವರು ಮಾದಕ ಮದನಾರಿ ಶಕೀಲಾ ಪಾತ್ರ ಜೀವ ತುಂಬಿದ್ದು ವೈಯಾರವಾಗಿ ನಟಿಸಿದ್ದಾರೆ.

ಇದೀಗ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, 90ರ ದಶಕದಲ್ಲಿ ಶಕೀಲಾ ಅವರನ್ನು ಮಿಸ್ ಮಾಡಿಕೊಂಡವರಿಗೆ ಮತ್ತೆ ಶಕೀಲಾ ಕಾಣಿಸಿಕೊಳ್ಳಲಿದ್ದಾರೆ.

ಸುಗೀಶ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಸಾಮಾನ್ಯ ಕುಟುಂಬದ ಹುಡುಗಿ ಅಶ್ಲೀಲ ಚಿತ್ರತಾರೆಯಾಗಿ ಹೇಗೆ ದಕ್ಷಿಣ ಭಾರತ ಚಿತ್ರರಂಗವನ್ನು ನಡುಗಿಸಿದರು ಅನ್ನುವುದನ್ನು ಹೇಳಲಾಗಿದೆಯಂತೆ.

- Advertisement -
spot_img

Latest News

error: Content is protected !!