Monday, April 29, 2024
Homeತಾಜಾ ಸುದ್ದಿಖ್ಯಾತ ಸೀರಿಯಲ್ ನಟಿ ಕೊರೊನಾಗೆ ಬಲಿ

ಖ್ಯಾತ ಸೀರಿಯಲ್ ನಟಿ ಕೊರೊನಾಗೆ ಬಲಿ

spot_img
- Advertisement -
- Advertisement -

ಮುಂಬೈ: ಮಹಾಮಾರಿ ಕೊರೊನಾಗೆ  ಸೀರಿಯಲ್ ನಟಿ ದಿವ್ಯಾ ಭಟ್ನಾಗರ್ ಬಲಿಯಾಗಿದ್ದಾರೆ. ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟಿ ದಿವ್ಯಾ ಇಂದು ಬೆಳಗ್ಗೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ನಟಿ ದಿವ್ಯಾ ಭಟ್ನಾಗರ್ ಅವರು ಕೊರೊನಾ ವೈರಸ್ ನಿಂದ ಬಳಲುತ್ತಿದ್ದರು. ಈ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮುಂಬೈನ ಸೆವೆನ್ಹಿಲ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ನಿಂದಾಗಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಇವರ ದೇಹ ಸ್ಥಿತಿ ಹದಗೆಟ್ಟ ನಂತರ ವೆಂಟಿಲೇಟರ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರಿಂದ ಒಂದು ವಾರದಿಂದ ಅವರ ಆರೋಗ್ಯ ಸ್ಥಿತಿ ತುಂಬಾನೇ ಹದಗೆಟ್ಟಿತ್ತು. ಆದ್ರೆ ಇಂದು ವಿಧಿವಶರಾಗಿದ್ದಾರೆ.

- Advertisement -
spot_img

Latest News

error: Content is protected !!