Thursday, April 25, 2024
Homeತಾಜಾ ಸುದ್ದಿಪಿಪಿಇ ಕಿಟ್ ಧರಿಸಿಯೇ ಹಸಮಣೆ ಏರಿದ ಜೋಡಿ: ವೈರಲ್ ಆಯ್ತು ಕೋವಿಡ್ ಮ್ಯಾರೇಜ್ ವಿಡಿಯೋ

ಪಿಪಿಇ ಕಿಟ್ ಧರಿಸಿಯೇ ಹಸಮಣೆ ಏರಿದ ಜೋಡಿ: ವೈರಲ್ ಆಯ್ತು ಕೋವಿಡ್ ಮ್ಯಾರೇಜ್ ವಿಡಿಯೋ

spot_img
- Advertisement -
- Advertisement -

ಜೈಪುರ: ಮಹಾಮಾರಿ ಕೊರೊನಾ ವೈರಸ್ ನಿಂದ ಅನೇಕ ಸಭೆ- ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಸದ್ಯ ಮದುವೆ ಸಮಾರಂಭಗಳು ಕೊರೊನಾ ನಿಯಮದ ಪ್ರಕಾರವೇ ನಡೆಯುತ್ತಿದೆ. ಈ ಮಧ್ಯೆ ರಾಜಸ್ಥಾನದ ಕೋವಿಡ್ ಸೆಂಟರಿನಲ್ಲೇ ಪಿಪಿಇಯ ಕಿಟ್ ಧರಿಸಿ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಹೌದು. ರಾಜಸ್ಥಾನದ ಬಾರ ಎಂಬಲ್ಲಿ ನಿನ್ನೆ ಈ ಮದುವೆ ನಡೆದಿದೆ.

ಮದುವೆ ದಿನದಂದೇ ವಧು ಕೊರೊನಾ ಟೆಸ್ಟ್ ಗೆ ಒಳಗಾದಾಗ ಆಕೆಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವಧು-ವರರು ಪಿಪಿಇ ಕಿಟ್ ಧರಿಸಿ ಸಪ್ತಪದಿ ತುಳಿದಿದ್ದಾರೆ. ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ವೀಡಿಯೋದಲ್ಲಿ ಅರ್ಚಕ ಮತ್ತು ಓರ್ವ ವ್ಯಕ್ತಿ ಮಾತ್ರ ಇರುವುದನ್ನು ಕಾಣಬಹುದಾಗಿದೆ. ಕಾರ್ಯಕ್ರಮದಲ್ಲಿ ಕೊರೊನಾ ನಿಯಮವನ್ನು ಪಾಲಿಸಲಾಗಿದೆ. ಅಗ್ನಿ ಕುಂಡದ ಮುಂದೆ ವಧು-ವರರು ಪಿಪಿಇ ಕಿಟ್ ಧರಿಸಿ ಕುಳಿತಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ವೀಡಿಯೋಗೆ ಸಾಕಷ್ಟು ಕಾಮೆಂಟ್ ಗಳು ಹಾಗೂ ಲೈಕ್ಸ್ ಗಳು ಬಂದಿವೆ.

- Advertisement -
spot_img

Latest News

error: Content is protected !!