Saturday, May 11, 2024
Homeತಾಜಾ ಸುದ್ದಿಕನ್ನಡ ಕಿರುತೆರೆಯ ಹಿರಿಯ ನಟ ನಿಧನ

ಕನ್ನಡ ಕಿರುತೆರೆಯ ಹಿರಿಯ ನಟ ನಿಧನ

spot_img
- Advertisement -
- Advertisement -

ಬೆಂಗಳೂರು:  ಹಿರಿಯ ಕಿರುತೆರೆ ನಟ ಯಲಹಂಕ ಬಾಲಾಜಿ ನಿಧನರಾಗಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ಹಿರಿಯ ನಟ ಬಾಲಾಜಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಹಿರಿಯ ನಟ ಬಾಲಾಜಿ ರಾಜಕೀಯ ಕ್ಷೇತ್ರದಲ್ಲಿಯೂ ತೊಡಗಿಕೊಂಡಿದ್ದರು. ಹಿರಿಯ ಕಲಾವಿದನ ಅಗಲಿಕೆಗೆ ಸ್ಯಾಂಡಲ್​ವುಡ್ ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

ಮಾಯಾಮೃಗ’, ‘ಮುಕ್ತ ಮುಕ್ತ’, ‘ಮಹಾ ಪರ್ವ’, ‘ಮನ್ವಂತರ’, ‘ಮುಕ್ತ’, ‘ಮಿಂಚು’, ‘ಮಗಳು ಜಾನಕಿ’, ‘ಚಂದಿರ’ ಮುಂತಾದ ಧಾರಾವಾಹಿಗಳಲ್ಲಿ ಯಲಹಂಕ ಬಾಲಾಜಿ ಅಭಿನಯಿಸಿದ್ದರು.

- Advertisement -
spot_img

Latest News

error: Content is protected !!