- Advertisement -
![]()
- Advertisement -
ಮಂಗಳೂರು: ಕಾರು , ಲಾರಿ ಹಾಗೂ ಬಸ್ ಮಧ್ಯೆ ಸರಣಿ ಅಪಘಾತ ಸಂಭವಿಸಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಜಪ್ಪಿನ ಮೊಗರು ಎಂಬಲ್ಲಿ ನಡೆದಿದೆ.
ಮಿನಿ ಲಾರಿ, ಕಾರು, ಬಸ್ಸಿನ ನಡುವೆ ಅಪಘಾತವಾಗಿದ್ದು, ಹಠಾತ್ ಬ್ರೇಕ್ ಹಾಕಿದ ಕಾರಿಗೆ ಲಾರಿ ಡಿಕ್ಕಿಯಾಗಿದೆ.ನಿಲ್ಲಿಸಿದ ಕಾರಿಗೆ ಕೇರಳ ಸಾರಿಗೆ ಬಸ್ ಢಿಕ್ಕಿಯಾಗಿದೆ.ಢಿಕ್ಕಿಯಾದ ರಭಸಕ್ಕೆ ಮುಂದೆ ಇದ್ದ ಮಿನಿ ಲಾರಿ ನಡುವೆ ಕಾರು ಅಪ್ಪಚ್ಚಿಯಾಗಿದೆ. ಅಪ್ಪಚ್ಚಿಯಾದ ಕಾರಿನಲ್ಲಿ ಸಿಲುಕಿದ ತಲಪಾಡಿ ನಿವಾಸಿ ಮಂಗಳೂರಿನ ಎಂಸಿಎಫ್ ಉದ್ಯೋಗಿ ದಿನೇಶ್ ಸಿಲುಕಿಕೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕ ಆಸ್ಪತ್ರೆ ದಾಖಲಾಗಿದ್ದಾರೆ.
ಸ್ಥಳೀಯ ಮನೆಯೊಂದರ ಸಿಸಿಟಿವಿಯಲ್ಲಿ ಘಟನೆಯ ವೀಡಿಯೋ ಸೆರೆಯಾಗಿದೆಯ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪರಿಶೀಲನೆ ಮಾಡಿದ್ದು ಪ್ರಕರಣ ದಾಖಲಾಗಿದೆ.
- Advertisement -


