ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೂಡ ಸೋಂಕಿತರ ಸಂಖ್ಯೆ 9 ಸಾವಿರ ಗಡಿ ದಾಟಿದ್ದು, 9217 ಮಂದಿಗೆ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸಂಖ್ಯೆ 4,30,947 ಕ್ಕೆ ಏರಿಕೆಯಾಗಿದೆ.
7021 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 3,22,454 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇವತ್ತು 129 ಮಂದಿ ಸೋಂಕಿತರು ಮೃತಪಟ್ಟಿದ್ದು ಇದುವರೆಗೆ 6937 ಜನ ಸಾವನ್ನಪ್ಪಿದ್ದಾರೆ. ಬರೋಬ್ಬರಿ 1,01,537 ಸಕ್ರಿಯ ಪ್ರಕರಣಗಳಿದ್ದು, 768 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಇಂದು ಬಾಗಲಕೋಟಿ – 77, ಬಳ್ಳಾರಿ – 375, ಬೆಳಗಾವಿ – 263, ಬೆಂಗಳೂರು ಗ್ರಾಮಾಂತರ – 77, ಬೆಂಗಳೂರು ನಗರ – 3161, ಬೀದರ್ – 98, ಚಾಮರಾಜನಗರ – 62, ಚಿಕ್ಕಬಳ್ಳಾಪುರ – 167, ಚಿಕ್ಕಮಗಳೂರು – 111, ಚಿತ್ರದುರ್ಗ – 142, ದಕ್ಷಿಣ ಕನ್ನಡ – 350, ದಾವಣಗೆರೆ – 297, ಧಾರವಾಡಿ – 264, ಗದಗ – 180, ಹಾಸನ – 218, ಹಾವೇರಿ – 190, ಕಲಬುರ್ಗಿ – 243, ಕೊಡಗು – 61, ಕೋಲಾರ – 104, ಕೊಪ್ಪಳ – 139, ಮಂಡ್ಯ – 249, ಮೈಸೂರು – 635, ರಾಯಚೂರು – 107, ರಾಮನಗರ – 126, ಶಿವಮೊಗ್ಗ – 549, ತುಮಕೂರು – 365, ಉಡುಪಿ – 227, ಉತ್ತರ ಕನ್ನಡ – 214, ವಿಜಯಪುರ – 63 ಮತ್ತು ಯಾದಗಿರಿ – 103 ಸೇರಿದಂತೆ ಒಟ್ಟು 9,217 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಎಂಬುದಾಗಿ ತಿಳಿಸಿದೆ.