Saturday, May 18, 2024
Homeತಾಜಾ ಸುದ್ದಿಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ರಾಗಿಣಿಗಿವೆ 3 ಹೆಸರುಗಳು

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ: ರಾಗಿಣಿಗಿವೆ 3 ಹೆಸರುಗಳು

spot_img
- Advertisement -
- Advertisement -

ಬೆಂಗಳೂರು: ಡ್ರಗ್ಸ್ ಡೀಲ್ ಪ್ರಕರಣದಲ್ಲಿ ಬಂಧನಕ್ಕೆ‌ ಒಳಗಾಗಿರುವ ನಟಿ ರಾಗಿಣಿಯ ವೈದ್ಯಕೀಯ ತಪಾಸಣೆಯ ನಂತರ ಸಿಸಿಬಿ ಅಧಿಕಾರಿಗಳು ವಿಚಾರಣೆಯನ್ನು‌ ಚುರುಕುಗೊಳಿಸಿದ್ದಾರೆ‌‌.

ನಟಿ ರಾಗಿಣಿ ದ್ವಿವೇದಿಗೆ ಮೂರು ಮೂರು ಹೆಸರಿವೆ. ಸಿಸಿಬಿ ಅಧಿಕಾರಿಗಳು ಇದುವರೆಗಿನ ತನಿಖೆಯ ವರದಿಯನ್ನು ಸಿದ್ದಪಡಿಸಿದ್ದಾರೆ. ರವಿಶಂಕರ್ ಮತ್ತು ರಾಗಿಣಿಯ ಹಲವು ಆಪ್ತರು ನಟಿ ರಾಗಿಣಿಯನ್ನ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದರು. ರಾಗಿಣಿ ದ್ವಿವೇದಿ, ಅಲಿಯಾಸ್ ಗಿಣಿ, ಅಲಿಯಾಸ್ ರಾಗ್ಸ್. ಈ ಮೂರು ಹೆಸರಲ್ಲಿ ರಾಗಿಣಿಯನ್ನ ಕರೆಯಲಾಗುತಿತ್ತು. ಹೈ ಹ್ಯಾಂಡ್ ಪಾರ್ಟಿಯಲ್ಲಿ ರಾಗಿಣಿ ರಾಗ್ಸ್ ಅಗಿರುತಿದ್ದರು. ಮನೆಯಲ್ಲಿ ಗಿಣಿಯಾಗಿರುತಿದ್ದರು ಹಾಗೂ ಹೊರ ಜಗತ್ತಿಗೆ ರಾಗಿಣಿ ದ್ವಿವೇದಿ ಯಾಗಿರುತಿದ್ರು.

ರಾಗಿಣಿ ದ್ವಿವೇದಿಯ ಡಿಲಿಟ್ ಮಾಡಿದ್ದ ಮೆಸೇಜ್ ರಿಟ್ರೀವ್
ರಾಗಿಣಿ ಬಂಧನ‌ಕ್ಕೂ ಮುನ್ನ ಮನೆ ಮೇಲೆ‌ ದಾಳಿ ನಡೆಸಿದ್ದ ಸಿಸಿಬಿ, ನಾಲ್ಕು ಮೊಬೈಲ್​ಗಳನ್ನು ಜಪ್ತಿ ಮಾಡಿಕೊಂಡು ಪರಿಶೀಲಿಸಿದಾಗ ವಾಟ್ಸಾಪ್ ಸಂದೇಶ ಹಾಗೂ‌ ಪೋಟೋಗಳು ಡಿಲಿಟ್ ಆಗಿರುವುದು ಕಂಡು ಬಂದಿತ್ತು. ಈ ಸಂಬಂಧ ಸಿಸಿಬಿ ತನಿಖಾಧಿಕಾರಿಗಳು ರಾಗಿಣಿ ಬಳಸುತ್ತಿದ್ದ ಮೊಬೈಲ್​ಗಳನ್ನು ರಿಟ್ರೀವ್ ಮಾಡಲು ಎಫ್​ಎಸ್​ಎಲ್​ಗೆ ಕಳುಹಿಸಿದ್ದರು. ಸದ್ಯ ಡಿಲಿಟ್ ಮಾಡಿದ್ದ ವಾಟ್ಸಾಪ್ ಸಂದೇಶಗಳನ್ನು ರಿಟ್ರೀವ್ ಮಾಡಿ ಸಿಸಿಬಿಗೆ ಎಫ್​ಎಸ್​ಎಲ್ ತಜ್ಞರು ವರದಿ ಸಲ್ಲಿಸಿದ್ದಾರೆ.

ಡಿಲಿಟ್ ಮಾಡಿರುವ ಎಲ್ಲಾ ಮೆಸೇಜ್​​ಗಳು ಸಿಸಿಬಿಗೆ ಲಭ್ಯವಾಗಿದ್ದು, ಟೆಕ್ನಿಕಲ್ ಸಾಕ್ಯ್ಯಾಧಾರಗಳ ಮೇಲೆ‌ ರಾಗಿಣಿಯನ್ನು ವಿಚಾರಣೆ ನಡೆಸಲಿದ್ದಾರೆ.

- Advertisement -
spot_img

Latest News

error: Content is protected !!