Sunday, June 28, 2026
Homeತಾಜಾ ಸುದ್ದಿರಸ್ತೆಬದಿಯಲ್ಲಿ ಮೃತದೇಹವಿದೆ ಎಂದು ಪೊಲೀಸರಿಗೆ ಕರೆ: ಮುಂದೆ ಕಾದಿತ್ತು ಪೊಲೀಸರಿಗೆ ದೊಡ್ಡ ಶಾಕ್

ರಸ್ತೆಬದಿಯಲ್ಲಿ ಮೃತದೇಹವಿದೆ ಎಂದು ಪೊಲೀಸರಿಗೆ ಕರೆ: ಮುಂದೆ ಕಾದಿತ್ತು ಪೊಲೀಸರಿಗೆ ದೊಡ್ಡ ಶಾಕ್

- Advertisement -
- Advertisement -

ಗಾಜಿಯಾಬಾದ್: ತುಂಬ ಹೊತ್ತಿನಿಂದ ರಸ್ತೆ ಬದಿಯಲ್ಲಿ ಒಂದು ಮೃತದೇಹ ಇದೆ ಎಂಬ ಕರೆ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬೇಸ್ತು ಬಿದ್ದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​​ನಲ್ಲಿ ನಡೆದಿದೆ.

ರಸ್ತೆ ಬದಿಯಲ್ಲಿ‌ ಮೃತದೇಹ ಬಿದ್ದಿದೆ ಎಂದು ಜನರು ಆತಂಕಿತರಾಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ರಸ್ತೆ ಸಂಚಾರವೇ ಬಂದ್ ಆಗಿಬಿಟ್ಟಿತ್ತು. ಕೊರೊನಾ ತೀವ್ರವಾಗಿರುವದರಿಂದ ಜನ ಬೆಚ್ಚಿಬಿದ್ದಿದ್ದರು. ಆದರೆ ಪೊಲೀಸರು ಬಂದು ನೋಡಿದಾಗ ವ್ಯಕ್ತಿಯೊಬ್ಬ ಗಾಢನಿದ್ರೆಯಲ್ಲಿ ಇರುವುದು ಕಂಡುಬಂತು.

ಬಿಳಿ ಶೀಟ್ ‌ಅನ್ನು ಅಡಿಯಿಂದ ಮುಡಿವರೆಗೆ ಹೊದ್ದು ಮಿಸುಕಾಡದೇ ಮಲಗಿದ್ದಾತನನ್ನು ಪೊಲೀಸರು ಎಬ್ಬಿಸಿದಾಗ ಜನ ನಿರುಮ್ಮಳರಾದರು. ಆತ ತನಗೇನು ತಿಳಿಯದವನಂತೆ ಎದ್ದು ಹೊರಟಾಗ ಅಲ್ಲಿದ್ದ ಜನ ನಿಟ್ಟುಸಿರು ಬಿಟ್ಟು ನಕ್ಕರು. ಜನ ಆತಂಕಿತರಾಗಿರುವ ಮತ್ತು ಪೊಲೀಸರು ಬಂದು ಆತನನ್ನು ಎಬ್ಬಿಸುವ ವಿಡಿಯೋ ಈಗ ವೈರಲ್ ಆಗಿದೆ. ನೆಟ್ಟಿಗರು ವಿಡಿಯೋ ‌ನೋಡಿ ಬಿದ್ದುಬಿದ್ದು ನಗೆಯಾಡಿದ್ದಾರೆ.

- Advertisement -

Latest News

error: Content is protected !!